ಸರ್ಕಾರಿ ಶಾಲೆ ಉಳಿಸಿ, ಬೆಳೆಸುವ ಕೆಲಸ ಆಗಬೇಕು: ಪ್ರಿಯಾಂಕ ಉಪೇಂದ್ರ

Jan 13, 2023, 1:47 PM IST

ಸರ್ಕಾರಿ ಶಾಲೆ ಉಳಿಸುವ ಹಾಗೂ ಸಾಮಾಜಿಕ ಕಳಕಳಿ‌ಯಿರುವ 'ಮಿಸ್‌ ನಂದಿನಿ' ಚಿತ್ರವನ್ನು, ಮಕ್ಕಳಿಗೆ ನೋಡುವ ಅವಕಾಶ ಕಲ್ಪಿಸಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಮನವಿ ಮಾಡಿದ್ದೇನೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದರು. ಸಿನಿಮಾದ ಆರಂಭದಲ್ಲಿ ಕಲೆಕ್ಷನ್ ಚೆನ್ನಾಗಿತ್ತು. ಈಗ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಡಿಮೆ‌ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಸಿನಿಮಾ ತೋರಿಸಿದ್ರೆ ಚೆನ್ನಾಗಿರುತ್ತೆ ಅಂತ ರಿಕ್ವೆಸ್ಟ್ ಮಾಡೋಕೆ ಬಂದಿದ್ದೆ ಎಂದರು. ತಮಿಳು, ತೆಲುಗುಗಳು ಸಿನಿಮಾ ಡಾಮಿನೇಟ್ ಆಗಿವೆ. ಅಟ್‌ಲೀಸ್ಟ್ ಒನ್ ಶೋ ಕೊಡಬಹುದು ಎಂದರು. ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಕೆಲಸ ಆಗಬೇಕು.ಸಾಮಾಜಿಕ ಕಳಕಳಿಯಿಂದ ಒಂದಷ್ಟು ಕನ್ನಡ ಸಿನಿಮಾ ಉಳಿಸುವ ರೂಲ್ಸ್ ಆಗಬೇಕು.ಕನ್ನಡ ಸಿನಿಮಾ ಉಳಿಸಲು ಸರ್ಕಾರ ಏನಾದರೂ ಕ್ರಮ ವಹಿಸಬೇಕು ಎಂದರು.

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಸಿಎಂ ಮಾಸ್ಟರ್ ಪ್ಲಾನ್: ರಾಜ್ಯಕ್ಕೆ ಬ ...