ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ: ಸಿಎಂ ಆಗ್ತೀನಿ ಎಂಬ ನಂಬಿಕೆ ನನಗಿದೆ ಎಂದ ಶಿವಕುಮಾರ್‌

May 14, 2023, 2:43 PM IST

ತುಮಕೂರು: ಅಜ್ಜಯ್ಯನ ದರ್ಶನದ ಬಳಿಕ ಡಿ.ಕೆ. ಶಿವಕುಮಾರ್‌ ಮಾತನಾಡಿದ್ದು, ತಮಗೆಲ್ಲ ಗೊತ್ತಿದೆ. ಈ ಮಠ ನನಗೆ ಪುಣ್ಯ ದೈವ ಕ್ಷೇತ್ರವಾಗಿದೆ.
ನನಗೆ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಗಂಗಾಧರ ಅಜ್ಜ, ಇಲ್ಲಿಯ ಸ್ವಾಮೀಜಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ, ಯಾರಿಗೆ ಟಿಕೆಟ್ ಕೊಡ್ಬೇಕು, ಯಾರಿಗೆ ಕೊಡ್ಬಾರ್ದು ಅನ್ನೋದನ್ನ, ಇಲ್ಲೇ ಮಾರ್ಗದರ್ಶನ ಪಡೆದು ನಿರ್ಧಾರ ಮಾಡಿದ್ದೇನೆ. ನನಗೆ ಸಂಪೂರ್ಣವಾದ ಮಾರ್ಗದರ್ಶನ ಕೊಟ್ಟಿದ್ದಾರೆ. ಇನ್ಕಮ್ ಟ್ಯಾಕ್ಸ್, ಐಟಿ ರೇಡ್ ಆದಾಗಲೂ ನಾನು ಅಜ್ಜಯ್ಯನ ಮಾರ್ಗದರ್ಶನ ಪಡೆದಿದ್ದೆ ಎಂದು ಡಿಕೆಶಿ ಹೇಳಿದ್ದಾರೆ. ಹೆಲಿಕಾಪ್ಟರ್ ದುರಂತ ಆದ ನಂತರ ಕೂಡ ನನ್ನ ಮಗಳು ಇಲ್ಲಿಗೆ ಬಂದು ಹೋದಳು. ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟವರು ಅಜ್ಜಯ್ಯನವ್ರು. ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡ್ಬಾರ್ದು ಅಂತಾ, ನಾನು 134 ಸೀಟು ಬರಬೇಕೆಂದು ಬೇಡಿಕೊಂಡಿದ್ದೆ. ಹಾಗೆಯೇ ಗೆದ್ದಿದ್ದೀವಿ. ನಾನು ಅಧಿಕಾರ ಹಿಡಿದಾಗಲೇ, ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡ್ಬೇಕು ಅನ್ನೋ ಮಾರ್ಗದರ್ಶನ ಬಂದಿತ್ತು. ಹೀಗಾಗಿಯೇ ನಾವು ಗೃಹಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡೋ ಯೋಜನೆ ಮಾಡಿದ್ದೀವಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಗುರಿ ತಲುಪಬೇಕಾದ್ರೆ ಗುರು ಮಾರ್ಗದರ್ಶನ ಬೇಕಾಗುತ್ತೆ. ಗುರು ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುತ್ತಾ ಇದ್ದೇವೆ. ಅವರು ಏನೇ ಹೇಳಿದ್ರು ನಾವು ಕೇಳ್ತಿವಿ. ನೋಡೋಣ ಸಿಎಂ ಆಗ್ತೀನಿ ಅನ್ನೋ ನಂಬಿಕೆ ನನಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾನೇ ಸಿಎಂ ಆಗ್ತೀನಿ ಅನ್ನೋ ವಿಶ್ವಾಸವನ್ನು ಡಿಕೆಶಿ ವ್ಯಕ್ತಪಡಿಸಿದರು. 

ಇದನ್ನೂ ವೀಕ್ಷಿಸಿ: ಬೆಳಗಾವಿಯಿಂದ 11 ಜನ ಗೆದ್ದಿರುವುದು ಸ್ವಾಭಿಮಾನದ ಪ್ರತೀಕವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್‌