Ghulam Nabi Azad: ಕಾಂಗ್ರೆಸ್‌ಗೆ ಮತ್ತೊಬ್ಬ ಹಿರಿಯ ನಾಯಕ ಗುಡ್‌ಬೈ: ಗುಲಾಂಗಾಗಿ ತೆಗೆದಿದೆಯಾ ಕೇಸರಿ ಕದ?

Aug 27, 2022, 11:53 AM IST

ನವದೆಹಲಿ (ಆ. 27): ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಮುಂದುವರೆದಿದ್ದು, ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ 50 ವರ್ಷದಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಅವರ ಈ ನಡೆ ಹಸ್ತ ಪಾಳಯದಲ್ಲಿ ತೀವ್ರ ತಲ್ಲಣ ಮೂಡಿಸಿದೆ. ರಾಜೀನಾಮೆ ಕೊಡುವುದರ ಜತೆಗೆ, ತಮ್ಮ 5 ಪುಟಗಳ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್‌ನಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅವರು ತೀವ್ರ ಟೀಕೆ ಮಾಡಿದ್ದಾರೆ. 

‘ಪಕ್ಷ ಈಗ ಸಂಪೂರ್ಣ ವಿನಾಶವಾಗಿದೆ. ನಾಯಕತ್ವವೇ ಪಕ್ಷವನ್ನು ವಂಚಿಸುತ್ತಿದೆ. ಪಕ್ಷದಲ್ಲಿನ ಅಧ್ಯಕ್ಷೀಯ ಚುನಾವಣೆ ಎಂಬುದು ಕೇವಲ ‘ತೋರಿಕೆ’ಯದ್ದಷ್ಟೇ’ ಎಂದು ವಾಗ್ದಾಳಿ ನಡೆಸಿರುವ ಅವರು, ‘2013ರಲ್ಲಿ ಕಾಂಗ್ರೆಸ್‌ಗೆ ಯಾವಾಗ ರಾಹುಲ್‌ ಗಾಂಧಿ ಅಧ್ಯಕ್ಷರಾದರೋ ಆಗಿನಿಂದಲೇ ಪಕ್ಷದ ಅವನತಿ ಆರಂಭವಾಯಿತು. ಪಕ್ಷದ ನಿರ್ಧಾರಗಳನ್ನು ರಾಹುಲ್‌ ಗಾಂಧಿ ಅವರ ಸೆಕ್ಯೂರಿಟಿ ಗಾರ್ಡ್‌ ಅಥವಾ ಪಿಎ ತೆಗೆದುಕೊಳ್ಳುತ್ತಿದ್ದಾರೆ. ಈಗ ಬೇಕಿರುವುದು ‘ಭಾರತ್‌ ಜೋಡೋ ಅಲ್ಲ, ಕಾಂಗ್ರೆಸ್‌ ಜೋಡೋ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ‘ಪಕ್ಷಕ್ಕಾಗಿ ಜೀವನ ಸವೆಸಿದ ತಮ್ಮಂಥವರಿಗೆ ಅವಮಾನ ಮಾಡಲಾಗಿದೆ’ ಎಂದು ಸೋನಿಯಾ ಗಾಂಧಿ ವಿರುದ್ಧವೂ ಕಿಡಿಕಾರಿದ್ದಾರೆ.

ಪುತ್ರ ಸದ್ದಾಂ ಜೊತೆಗೂಡಿ ಜಮ್ಮು ಕಾಶ್ಮೀರದಲ್ಲಿ ಗುಲಾಂ ನಬಿ ಹೊಸ ಪಕ್ಷ ಸ್ಥಾಪನೆ!