Oct 4, 2023, 12:30 PM IST
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ವರ್ಸಸ್ ಡಿಸಿಎಂ ವಾರ್ ಶುರುವಾಗಿದ್ದು, ನಿಗಮ ಮಂಡಳಿ ನೇಮಕ( corporation board appointment) ವಿಚಾರದಲ್ಲಿ ಸಿಎಂ, ಡಿಸಿಎಂ ನಡುವೆ ಡಿಶುಂ ಡಿಶುಂ ಶುರುವಾಗಿದೆ. ಶಾಸಕರ ಪರ ಸಿಎಂ ನಿಂತರೆ, ಕಾರ್ಯಕರ್ತರ ಪರ ಡಿಸಿಎಂ ಬ್ಯಾಟಿಂಗ್ ಬೀಸಿದ್ದಾರೆ. 30 ಶಾಸಕರನ್ನು ನಿಗಮ ಮಂಡಳಿಗೆ ನೇಮಿಸಲು ಸಿದ್ದರಾಮಯ್ಯ(Siddaramaiah) ಒಲವು ತೋರುತ್ತಿದ್ದಾರೆ. ಆದ್ರೆ ಶಾಸಕರನ್ನು ಗೆಲ್ಲಿಸಿದ್ದು ನಾವು ನಮಗೆ ಅವಕಾಶ ಕೊಡಿ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಹಾಗಾಗಿ ಕಾರ್ಯಕರ್ತರ ಪರವಾಗೇ ಡಿಸಿಎಂ ಡಿ.ಕೆ. ಶಿವಕುಮಾರ್(DK shivakumar) ಬ್ಯಾಟಿಂಗ್ ಬೀಸುತ್ತಿದ್ದಾರೆ. ನಿಗಮ ಮಂಡಳಿ ಕಾರ್ಯಕರ್ತರಿಗೋ, ಶಾಸಕರಿಗೋ..? ಫುಲ್ ಕನ್ಫ್ಯೂಸ್ ಆಗಿದೆ. ಒಮ್ಮತಕ್ಕೆ ಬಾರದೇ ನಿಗಮ ಮಂಡಳಿ ನೇಮಕದ ಗೊಂದಲದಲ್ಲಿ ಸಿಎಂ ಇದ್ದಾರೆ. ಗೊಂದಲದಿಂದ ಲೋಕಸಭೆಗೂ ಮುನ್ನ ನಿಗಮ ನೇಮಕ ಆಗುವುದು ಅನುಮಾನವಾಗಿದೆ.
ಇದನ್ನೂ ವೀಕ್ಷಿಸಿ: ದೇಶಾದ್ಯಂತ ಜಾತಿ ಗಣತಿಗೆ ಮತ್ತಷ್ಟು ಕೂಗು ಏಳುತ್ತಾ? ನಿತೀಶ್ ಹಾದಿಯಲ್ಲೇ ಸಾಗ್ತಾರಾ ಸಿದ್ದರಾಮಯ್ಯ?