KS Eshwarappa Statement : ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಚಿಂತನೆ

KS Eshwarappa Statement : ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಚಿಂತನೆ

Suvarna News   | Asianet News
Published : Feb 16, 2022, 06:57 PM IST

ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
ಪರಿಷತ್ ಕಲಾಪ ಮುಂದೂಡಿದ್ರೂ ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ
ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕೆ.ಎಸ್.ಈಶ್ವರಪ್ಪ ಹೇಳಿಕೆ

ಬೆಂಗಳೂರು (ಫೆ.16):  ಕೆಂಪು ಕೋಟೆಯ (Red Fort) ಮೇಲೆ ಕೇಸರಿ ಧ್ವಜ ಹಾರಿಸಲಾಗುತ್ತದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ (KS Eshwarappa)ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಧಾನಸಭೆಯಲ್ಲಿ (Vidhana Sabha) ಕೋಲಾಹಲಕ್ಕೆ ಕಾರಣವಾಯಿತು. ಇದರ ಬೆನಲ್ಲಿಯೇ ಸದನದಲ್ಲಿ ರಾಷ್ಟ್ರಧ್ವಜವನ್ನು (National Flag) ಹಿಡಿದು ಕಾಂಗ್ರೆಸ್ (Congress) ಪ್ರತಿಭಟನೆ ಮಾಡಿದ್ದಕ್ಕೆ ಬಿಜೆಪಿ (BJP) ಆಕ್ರೋಶ ವ್ಯಕ್ತಪಡಿಸಿದ್ದು, ಸದನದಲ್ಲಿ ಪ್ರತಿಭಟನೆಯ ವಿಚಾರಕ್ಕೆ ರಾಷ್ಟ್ರಧ್ವಜವನ್ನು ಬಳಸಿದ್ದು ತಪ್ಪು ಎಂದು ಹೇಳಿದೆ.

ಇನ್ನು ಈಶ್ವರಪ್ಪ ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಅಹೋರಾತ್ರಿ ಇದನ್ನು ಮುಂದುವರಿಸಲು ಚಿಂತನೆ ನಡೆಸಿದೆ. ವಿಧಾನ ಪರಿಷತ್ ಕಲಾಪ ನಾಳೆ 11 ಗಂಟೆಗೆ ಮುಂದೂಡಿಕೆಯಾಗಿದ್ದರೂ, ಸದಸ್ಯರು ಸ್ಥಳದಿಂದ ತೆರಳದಂತೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸೈನ್ಯದಲ್ಲಿ ಸಿಖ್ಖರಿಗೆ ಟರ್ಬನ್‌ಗೆ ಅವಕಾಶ, ಶಾಲೆಗಳಲ್ಲಿ ಹಿಜಾಬ್‌ಗೆ ಯಾಕಿಲ್ಲ.? ವಕೀಲರ ವಾದ
ದೇಶದಲ್ಲಿ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಒಂದು ಶಿಸ್ತು ಇದೆ. ಬೇಕಾಬಿಟ್ಟಿಯಾಗಿ ಇದರ ಬಳಕೆ ಮಾಡುವಂತಿಲ್ಲ. ರಾಜಕಾರಣಕ್ಕಾಗಿ ಕಾಂಗ್ರೆಸ್ ರಾಷ್ಟ್ರಧ್ವಜವನ್ನು ಬಳಕೆ ಮಾಡುತ್ತಿದೆ' ಎಂದು ಬಿಜೆಪಿ ಆರೋಪ ಮಾಡಿದೆ. ಇದರ ನಡುವೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಎಸ್ ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ನಮ್ಮ ಧ್ವಜ, ನಮ್ಮ ರಾಷ್ಟ್ರಗೀತೆಗೆ ಎಲ್ಲರೂ ಗೌರವ ನೀಡಬೇಕು. ಆದರೆ, ಈಶ್ವರಪ್ಪ ದೇಶದ ಧ್ವಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಸಿದ್ಧರಾಮಯ್ಯ (Siddaramaiah) ಹೇಳಿದ್ದಾರೆ.

21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more