ಕಾಂಗ್ರೆಸ್‌ನಿಂದ ಹೋಮ-ಹವನ: ಬಿಜೆಪಿ ಸರ್ಕಾರ ತೊಲಗಲೆಂದು ದೇವರ ಮೊರೆ

May 8, 2023, 6:03 PM IST

ಬೆಂಗಳೂರು: ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಹೋಮ -ಹವನ ಮಾಡಲಾಗಿದೆ. ಭ್ರಷ್ಟ ಬಿಜೆಪಿ ಸರ್ಕಾರ ತೊಲಗಲಿ ಎಂದು ಕಾಂಗ್ರೆಸ್‌ ಹೋಮ ಮಾಡಿಸಿದೆ. ಮನೋಹರ್‌ ನೇತೃತ್ವದ ಕಾರ್ಯಕರ್ತರು ಹೋಮ ಮಾಡಿಸಿದ್ದಾರೆ. ಬೆಲೆ ಏರಿಕೆ ಇಳಿಯಲಿ- ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಪಠಣ ಮಾಡಲಾಯಿತು. ಸಿಲಿಂಡರ್‌, ಸ್ಕೂಟರ್‌ ಇಟ್ಟುಕೊಂಡು ಕಾರ್ಯಕರ್ತರು ಹೋಮ ಮಾಡಿಸಿದ್ದಾರೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ಸಿಗಬೇಕು. ಭ್ರಷ್ಟಚಾರ ನಿರ್ಣಾಮ ಆಗಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ದೇವರ ಮೊರೆ ಹೋದ್ರು. ಈ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ವೀಕ್ಷಿಸಿ: ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ : ಸಿ ಎಂ ಬೊಮ್ಮಾಯಿ