Dec 10, 2020, 3:47 PM IST
ಬೆಂಗಳೂರು(ಡಿ.10): ಸದನಕ್ಕೆ ಗೈರು ಹಾಜರಾದ ಕಾಂಗ್ರೆಸ್ ನಾಯಕರು ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ವಿಧಾನಸೌಧದಿಂದ ಫ್ರೀಡಂಪಾರ್ಕ್‌ವರೆಗೆ ಕಾಲ್ನಡಿಗೆಯಿಂದಲೇ ಕೈ ನಾಯಕರು ಆಗಮಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ರೈತರ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ.
ರಾಯಚೂರು: ಶಾಲೆಗಳು ತೆರೆಯುವಂತೆ ಆಗ್ರಹಿಸಿ ಹೋರಾಟ
ಇಂದು ರೈತರು ಹಾಗೂ ಸಾರಿಗೆ ನೌಕರರು ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳುವ ಮೂಲಕ ಪ್ರತಿಭಟನೆಲ್ಲಿ ಭಾಗಿಯಾಗಿದ್ದಾರೆ.