Mekedatu Padayatra ಮೇಕೆದಾಟು ಮಹಾಕಾಳಗ, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಭಾಗಿ

Feb 27, 2022, 5:51 PM IST

ರಾಮನಗರ, (ಫೆ.27): 2ನೇ ಹಂತದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಅನ್ನದಾನೇಶ್ವರ ಸ್ವಾಮಿಜಿಯಿಂದ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. 

ಎರಡನೇ ಹಂತದ ಕಾಂಗ್ರೆಸ್​ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಪಾದಯಾತ್ರೆಯಲ್ಲಿ ಕ್ರಾಂಗ್ರೆಸ್​ ಕಾರ್ಯಕರ್ತರು ಭಾಗವಹಿಸಿದ್ದು, ಇಂದು(ಭಾನುವಾರ) ಒಂದೇ ದಿನ ಸುಮರು 16 ಕಿ.ಮೀ. ನಡೆಯಲಿದ್ದಾರೆ.

Mekedatu Padayatre: ಮೇಕೆದಾಟು ಪಾದಯಾತ್ರೆಗೆ ಚಾಲನೆ, ಇಂದು 16 ಕಿಮೀ ನಡಿಗೆ

ಮೇಕೆದಾಟು-(Mekedatu) 2.0 ಗೆ ಚಾಲನೆ ಸಿಕ್ಕಿದೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಪಾದಯಾತ್ರೆಗೆ ಡಿಕೆಶಿ ಚಾಲನೆ ಕೊಟ್ಟಿದ್ದಾರೆ. ಒಟ್ಟು 79.8 ಕಿಮೀ ದೂರ ಸಾಗಲಿದ್ದಾರೆ ಕಾಂಗ್ರೆಸ್ಸಿಗರು. ಇಂದು 16 ಕಿಮೀ ನಡೆಯಲಿದ್ದಾರೆ. ನಾಳೆ ಸಂಜೆ ಬಿಡದಿಯಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವವರ ಮೇಲೆ ನಿಗಾ ಇಡಲು ದಾರಿಯುದ್ದಕ್ಕೂ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲಲ್ಲಿ ಕುಡಿಯುವ ನೀರು, ತಂಗುವ ವ್ಯವಸ್ಥೆ ಮಾಡಲಾಗಿದೆ.