Oct 13, 2021, 1:06 PM IST
ಬೆಂಗಳೂರು (ಅ.13): ಕೆಪಿಸಿಸಿ (KPCC) ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK shivakumar) ವಿರುದ್ಧ ಅವರೊಬ್ಬ ಕರಪ್ಟ್ ಎಂದಿದ್ದ ಮುಖಂಡ ಸಲೀಂ ತಲೆದಂಡವಾಗಿದೆ.
ಕಾಂಗ್ರೆಸ್‌ನಲ್ಲಿ ಸುವರ್ಣನ್ಯೂಸ್ ವರದಿ ಸಂಚಲನ ಮೂಡಿಸಿದ್ದು, ವರದಿ ಬೆನ್ನಲ್ಲೇ ಎಚ್ಚೆತ್ತ ಕೆಪಿಸಿಸಿ ಕಾಂಗ್ರೆಸ್ ಪಕ್ಷದಿಂದಲೇ ಸಲೀಂ ಅವರನ್ನು ಅಮಾನತು ಮಾಡಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಿಂದಲೇ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ : ಉಗ್ರಪ್ಪ ರಿಯಾಕ್ಷನ್
ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಮುಖಂಡ ಸಲೀಂ ಹಾಗು ವಿ.ಎಸ್ ಉಗ್ರಪ್ಪ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿದ್ದು, ಅವರೊಬ್ಬ ಭ್ರಷ್ಟ ಎಂದಿದ್ದರು. ಇದರಿಂದ ಸದ್ಯ ಸಲೀಂ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.