Nov 29, 2022, 9:01 PM IST
ಬೆಂಗಳೂರು (ನ.29): ಎದುರಾಳಿಗಳ ಹಿಮ್ಮೆಟ್ಟಿಸೋಕೆ ರಾಹುಲ್ ಗಾಂಧಿ ಬಳಿ ಸಿದ್ಧವಾಗಿದೆ ಭರ್ಜರಿ ಅಸ್ತ್ರ. ಅದೊಂದು ಅಸ್ತ್ರಕ್ಕೆ ಕಾಂಗ್ರೆಸ್ ಶತ್ರುಗಳು ಸುಸ್ತಾಗ್ತಾರಾ, ಅನ್ನೋ ಲೆಕ್ಕಾಚಾರ ಶುರುವಾಗಿದೆ. ಮೋದಿ ಅವರ ಅಸ್ತ್ರವನ್ನೇ ರಾಹುಲ್ ಈಗ ಪ್ರತ್ಯಸ್ತ್ರ ಮಾಡಿಕೊಂಡರೇ ಎನ್ನುವ ಅನುಮಾನ ಕಾಡಿದೆ.
ಹೌದು, ರಾಹುಲ್ ಗಾಂಧಿ ಅವರೀಗ ಎದುರಾಳಿಗಳ ವಿರುದ್ಧ ಫಿಟ್ನೆಸ್ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಆದರೆ, ಇದರಿಂದ ಯಾರಿಗೆ ಹೇಗೆ ಆಘಾತ ಎದುರಾಲಿದೆ.? ರಾಹುಲ್ ಗಾಂಧಿ ಅವರಿಗೆ ಹೇಗೆ ಲಾಭವಾಗಲಿದೆ? ಅನ್ನೋದರ ಕುತೂಹಲವಿದೆ. ರಾಹುಲ್ ಗಾಂಧಿ ಅವರೇನೋ ಬಲಭೀಮ ಅನ್ನೋದು, ಯಾತ್ರೆ ಮೂಲಕ ಗೊತ್ತಾಗುತ್ತಿದೆ.
ರಾಹುಲ್ ಈಗ ನೋಡಲು ಸದ್ದಾಂ ಹುಸೇನ್ ರೀತಿ ಕಾಣ್ತಾರೆ: ಅಸ್ಸಾಂ ಸಿಎಂ ವಂಗ್ಯ
ರಾಹುಲ್ ಗಾಂಧಿ ಅವರು ಫಿಟ್ನೆಸ್ ಮೂಲಕ ಎದುರಾಳಿಗಳನ್ನ ಸೋಲಿಸೋಕೆ ನೋಡ್ತಾ ಇದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದೇ ಅಸ್ತ್ರವನ್ನು ಬಳಸಿಕೊಂಡು ಮುಂಚಿನ ಚುನಾವಣೆಯನ್ನು ಎದುರಿಸುವ ಯೋಜನೆಯಲ್ಲಿದ್ದಾರೆ ಕಾಂಗ್ರೆಸ್‌ನ ಯುವರಾಜ.