Feb 19, 2023, 3:06 PM IST
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬತ್ತಳಿಕೆಯಿಂದ 'ಕೋವಿಡ್ ಫೈಲ್ಸ್' ಎಂಬ ಮತ್ತೊಂದು ಖತರ್ನಾಕ್ ಅಸ್ತ್ರ ಸಿಡಿಯಲಿದ್ದು, ಇದು ಕರ್ನಾಟಕ ಕುರುಕ್ಷೇತ್ರದ ಯುದ್ಧ ಗೆಲ್ಲಲು ಕನಕಪುರ ಬಂಡೆ ಹೆಣೆದಿರೋ ರೋಚಕ ರಣವ್ಯೂಹ ಆಗಿದೆ. ಕೋವಿಡ್ ಕುಲುಮೆಯಲ್ಲಿ ನೊಂದು ಬೆಂದವರ ದಾರುಣ ಕಥೆಯನ್ನು ಹೊತ್ತು ಬರಲಿದೆ ಕೋವಿಡ್ ಫೈಲ್ಸ್. ಕೆಪಿಸಿಸಿ ಅಧ್ಯಕ್ಷರ ಯುದ್ಧವ್ಯೂಹದಿಂದ ಎದ್ದು ಬಂದಿರೋ ಕೋವಿಡ್ ಫೈಲ್ಸ್ ಅಸ್ತ್ರದ ಅಸಲಿ ಗುಟ್ಟು ರೋಚಕವಾಗಿದೆ. ಕೋವಿಡ್ ಫೈಲ್ಸ್'ನ ಮೇನ್ ವಿಚಾರ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತ. ಆ ದುರಂತವನ್ನು ಸಿನಿಮಾ ಮೂಲಕ ರಾಜ್ಯದ ಜನತೆಗೆ ಮತ್ತೆ ನೆನಪು ಮಾಡಿಕೊಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.