
ಪಾರ್ಲಿಮೆಂಟ್ ಆವರಣದಲ್ಲೂ ಕಾಂಗ್ರೆಸ್-ಬಿಜೆಪಿ ಸಂಸದರ ಹೈಡ್ರಾಮಾವೇ ನಡೀತು. ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್-ಬಿಜೆಪಿ ಸಂಸದರು ಪ್ರತಿಭಟಿಸಿದ್ರು. ಈ ವೇಳೆ ರಾಹುಲ್ ಗಾಂಧಿ, ಸಂಸದ ಪ್ರತಾಪ್ ಸಾರಂಗಿ ಅವರನ್ನು ತಳ್ಳಿದು, ತಲೆಗೆ ಪೆಟ್ಟಾಗಿ ರಕ್ತ ಸೋರಿಕೆಯಾಗಿದೆ ಎಂದು ಬಿಜೆಪಿ ಆರೋಪಿಸ್ತಿದೆ. ಆದ್ರೆ ಕಾಂಗ್ರೆಸ್ ಈ ಆರೋಪ ಅಲ್ಲಗಳೆದಿದ್ದಾರೆ.
ಬೆಂಗಳೂರು(ಡಿ.20): ಚಳಿಗಾಲದ ಅಧಿವೇಶನದ ಕೊನೇ ದಿನ ವಿಧಾನಪರಿಷತ್ ರಣಾಂಗಣವಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿ.ಟಿ ರವಿ ‘ಪ್ರಾಸ್ಟಿಟ್ಯೂಟ್’ ಎಂದು ಕರೆದಿದ್ದಾರೆ ಅನ್ನೋ ಆರೋಪ ಕೋಲಹಲವನ್ನೇ ಸೃಷ್ಟಿಸಿತು. ಸಿ.ಟಿ ರವಿ, ನನಗೆ 10 ಸಲ ‘ಪ್ರಾಸ್ಟಿಟ್ಯೂಟ್’ ಎಂದಿದ್ದಾರೆ ಅಂತ ಹೆಬ್ಬಾಳ್ಕರ್ ಕಣ್ಣೀರು ಹಾಕುತ್ತಾ ಸದನದಿಂದ ಹೊರ ನಡೆದ್ರು. ಇದಾದ ಬಳಿಕ ಸದನದ ಒಳಗೂ ಹೊರಗೂ ಭಾರೀ ಪ್ರತಿಭಟನೆ, ಗದ್ದಲ, ಗಲಾಟೆಗಳೇ ನಡೆದ್ವು. ಪ್ರತಿಭಟನೆ ಕಿಚ್ಚು ಹೆಚ್ಚಾಗ್ತಿದ್ದಂತೆ ಪೋಲೀಸರು ಸಿ.ಟಿ ರವಿ ಬಂಧಿಸಿದ್ರು.
ಸಿಟಿ ರವಿ ಖಾನಪುರ ಠಾಣೆಯಿಂದ ಬೆಂಗಳೂರಿಗೆ ಶಿಫ್ಟ್, ಪೊಲೀಸರ ವಿರುದ್ದ ಬಿಜೆಪಿ ಆಕ್ರೋಶ!
ಇದಕ್ಕೂ ಮೋದಲು ಹೆಬ್ಬಾಳ್ಕರ್ ಬೆಂಬಲಿಗರು, ಸಿ.ಟಿ ರವಿ ಮೇಲೆ ಮುತ್ತಿಗೆ, ಹಲ್ಲೆಗೂ ಮುಂದಾದ್ರು. ಮಾರ್ಷಲ್‌ಗಳು ಹಲ್ಲೆಯಾಗೋದನ್ನ ತಡೆದ್ರು. ಅತ್ತ ಪಾರ್ಲಿಮೆಂಟ್ ಆವರಣದಲ್ಲೂ ಕಾಂಗ್ರೆಸ್-ಬಿಜೆಪಿ ಸಂಸದರ ಹೈಡ್ರಾಮಾವೇ ನಡೀತು. ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್-ಬಿಜೆಪಿ ಸಂಸದರು ಪ್ರತಿಭಟಿಸಿದ್ರು. ಈ ವೇಳೆ ರಾಹುಲ್ ಗಾಂಧಿ, ಸಂಸದ ಪ್ರತಾಪ್ ಸಾರಂಗಿ ಅವರನ್ನು ತಳ್ಳಿದು, ತಲೆಗೆ ಪೆಟ್ಟಾಗಿ ರಕ್ತ ಸೋರಿಕೆಯಾಗಿದೆ ಎಂದು ಬಿಜೆಪಿ ಆರೋಪಿಸ್ತಿದೆ. ಆದ್ರೆ ಕಾಂಗ್ರೆಸ್ ಈ ಆರೋಪ ಅಲ್ಲಗಳೆದ್ರು. ಇನ್ನು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕೊಂಚ ರಿಲೀಫ್ ಸಿಕ್ಕತಾಂಗಿದೆ. ಸಿಬಿಐ ತನಿಖೆ ಕೋರಿದ್ದ ಅರ್ಜಿ ಆದೇಶ ಜನವರಿ 15ಕ್ಕೆ ಮುಂದಕ್ಕೆ ಹೋಗ್ತಿದೆ. ಜನವರಿ 28ರವರೆಗೆ ಮುಡಾ ತನಿಖಾ ವರದಿ ಸಲ್ಲಿಸದಂತೆ ಹೈಕೋರ್ಟ್ ಆದೇಶಿಸಿದೆ.