Aug 11, 2023, 1:40 PM IST
ಅದು ಕಳೆದ ಬಿಜೆಪಿ(BJP) ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ತೂಫಾನ್. ಅದು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದ ಸುನಾಮಿ. ಅದೇ ತೂಫಾನ್, ಅದೇ ಸುನಾಮಿಯೀಗ ಕಾಂಗ್ರೆಸ್ ಸರ್ಕಾರದ ಮೇಲೆ ಅಪ್ಪಳಿಸಿದೆ. ಸಿದ್ದು ಸರ್ಕಾರಕ್ಕೆ ಕಮಿಷನ್(Commission) ಕಂಟಕ ಶುರುವಾಗಿದೆ. ಅವತ್ತು 40% ಅಸ್ತ್ರ, ಇವತ್ತು 15% ರಿವರ್ಸ್ ಅಸ್ತ್ರ. ಕಮಿಷನ್ ಅಂದಾಕ್ಷಣ ಕಣ್ಮುಂದೆ ಬರೋದು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದ್ದು ಮಾಡಿದ್ದ 40% ಕಮಿಷನ್ ಮ್ಯಾಟರ್. ಅವತ್ತು ಇಡೀ ಕೇಸರಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದದ್ದು ಇದೇ 40% ಆರೋಪ. ರಾಜ್ಯ ಗುತ್ತಿಗೆದಾರರ ಸಂಘ ಸ್ಫೋಟಿಸಿದ್ದ 40% ಬಾಂಬ್, ಬಿಜೆಪಿ ಸರ್ಕಾರವನ್ನು ಪೀಸ್ ಪೀಸ್ ಮಾಡಿ ಬಿಟ್ಟಿತ್ತು. ಅದೇ ಗುತ್ತಿಗೆದಾರರೀಗ ಕಾಂಗ್ರೆಸ್(Congress) ಸರ್ಕಾರದ ಮೇಲೆ ಮುಗಿ ಬಿದ್ದಿದ್ದಾರೆ. ಅದ್ರಲ್ಲೂ ಬಿಬಿಎಂಪಿ (BBMP)ವ್ಯಾಪ್ತಿಯ ಕಾಂಟ್ರಾಕ್ಟರ್‌ಗಳು ಕೈ ಸರ್ಕಾರದ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದಾರೆ. ಕಾರಣ, ಕಮಿಷನ್ ರಹಸ್ಯ. ಕಳೆದ 2 ವರ್ಷಗಳಲ್ಲಿ ಆಗಿರೋ ಕಾಮಗಾರಿಗಳ ಬಿಲ್ ಅನ್ನು ಬಿಬಿಎಂಪಿ ತಡೆ ಹಿಡಿದದ್ದೇ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣ. ಕೆಲ ಕಾಮಗಾರಿಗಳ ಮೇಲೆ ಅನುಮಾನವಿದ್ದು, ಕಾಮಗಾರಿ ನಡೆಸದೇನೇ ಬೋಗಸ್ ಬಿಲ್ ಸೃಷ್ಟಿಸಲಾಗಿದೆ ಅನ್ನೋ ದೂರುಗಳು ಸರ್ಕಾರಕ್ಕೆ ಬಂದಿವೆಯಂತೆ. ಹೀಗಾಗಿ ಕಾಮಗಾರಿಗಳ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಆದೇಶ ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಕೊಲೆಗಾರನನ್ನ ಬೇಟೆಯಾಡಿತ್ತು ನಿಯತ್ತಿನ ಶ್ವಾನ: ಬರ್ಬರ ಕೊಲೆ ಕೇಸ್ ಬೇಧಿಸಿದ ಲೇಡಿ ಸಿಂಗಂ..!