Mar 15, 2024, 10:38 AM IST
ಲೋಕಸಭಾ ಚುನಾವಣೆ ಘೋಷಣೆ ಹೊತ್ತಿನಲ್ಲಿ CNN News 18 Survey ಹೊರಬಂದಿದೆ. ಇದರ ಪ್ರಕಾರ, ಕರ್ನಾಟಕದ(Karnataka) ಒಟ್ಟು 28 ಕ್ಷೇತ್ರದಲ್ಲಿ 25ರಲ್ಲಿ ಬಿಜೆಪಿ-ಜೆಡಿಎಸ್(BJP-JDS) ಮೈತ್ರಿಯ ಕೂಟ ಎನ್‌ಡಿಎ ಒಕ್ಕೂಟ ಜಯಸಾಧಿಸಲಿದೆ. ಉಳಿದ 3 ಕ್ಷೇತ್ರದಲ್ಲಿ ಕಾಂಗ್ರೆಸ್(Congress) ಗೆಲ್ಲಿಲಿದೆ ಎಂದು ಸಿಎನ್‌ಎನ್ ನ್ಯೂಸ್ 18 ಸಮೀಕ್ಷೆ(CNN News 18 Survey ) ಭವಿಷ್ಯ ನುಡಿದಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಹಾಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರರು 1 ಸ್ಥಾನ ಹೊಂದಿದ್ದಾರೆ. ಈ ಚುನಾವಣೆಯಲ್ಲೂ ಬಿಜೆಪಿ, ಬಹುತೇಕ ಕಳೆದ ಸಲದ ಪ್ರದರ್ಶನವನ್ನೇ ತೋರಲಿದೆ ಎಂದು ಸಮೀಕ್ಷೆ ನುಡಿದಿದೆ.
ಇದನ್ನೂ ವೀಕ್ಷಿಸಿ: CNN News 18 Survey: ಬಿಜೆಪಿ ನೇತೃತ್ವದ ಮೈತ್ರಿಕೂಟ 400 ಸ್ಥಾನ ಮುಟ್ಟುತ್ತಾ? ಮೋದಿ ಮಣಿಸಲು ಒಂದಾದ INDIA ಕೂಟಕ್ಕೆಷ್ಟು ಸ್ಥಾನ?