Dec 19, 2024, 12:18 PM IST
ಬೆಂಗಳೂರು(ಡಿ.19): ಅನುದಾನಕ್ಕೂ ಸರ್ಕಾರದ ಬಳಿ ದುಡ್ಡಿಲ್ಲವಾ?. ಇಂತಹದೊಂದು ಪ್ರಶ್ನೆ ಇದೀಗ ಎಲ್ಲ ಕಾಡುತ್ತಿದೆ. ಹೌದು, ಕಾಂಗ್ರೆಸ್ ಶಾಸಕರ ಅನುದಾನದ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಅವರು ರೆಡ್ ಸಿಗ್ನಲ್ ನೀಡಿದ್ದಾರೆ. ಹಾಗಾದರೆ ಸರ್ಕಾರದ ಖಜಾನೆ ಖಾಲಿಯಾಗಿದೆಯಾ?. 10 ಕೋಟಿ ಕೇಳಿದ್ರೂ ಕಾಂಗ್ರೆಸ್ ಶಾಸಕರಿಗೆ ಅನುದಾನವೇ ಸಿಗುತ್ತಿಲ್ವಂತೆ. ಇನ್ನು ಬಿಜೆಪಿ ಶಾಸಕರು 50 ಕೋಟಿ, 100 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ.
ಗ್ಯಾರಂಟಿಗಳ ಹೊಡೆತಕ್ಕೆ ಇಲಾಖಾ ಅನುದಾನಕ್ಕೆ ಕೊಕ್ಕೆ ಹಾಕಲಾಗಿದೆ. ಅಭಿವೃದ್ಧಿ ದುಡ್ಡು ಗ್ಯಾರಂಟಿಗೆ ಬಳಸಿಕೊಳ್ಳಲಾಗುತ್ತಿದೆಯಾ?. ರಾಜ್ಯ ಸರ್ಕಾರದಲ್ಲಿ ಶಾಸಕರ ಅನುದಾನಕ್ಕೂ ದುಡ್ಡಿಲ್ಲದ ಸ್ಥಿತಿ ಇದೆಯಾ?. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅನುದಾನಕ್ಕೆ ಶಾಸಕರು ಬೇಡಿಕೆಯನ್ನ ಇಟ್ಟಿದ್ದಾರೆ. ಆದ್ರೆ, ಶಾಸಕರ ಅನುದಾನದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅವಕಾಶ ಕೊಟ್ಟಿಲ್ಲ.
ದಿಢೀರ್ ಮೋದಿ ಭೇಟಿ: ಯತ್ನಾಳ್ ಬಣದ ವಿರುದ್ಧ ವರಿಷ್ಠರಿಗೆ ದೂರು ನೀಡ್ತಾರಾ ವಿಜಯೇಂದ್ರ?
10 ಕೋಟಿ ಅನುದಾನ ಪಡೆಯಲಾಗದೇ ಕಾಂಗ್ರೆಸ್ ಶಾಸಕರು ಪರದಾಡುತ್ತಿದ್ದಾರೆ. ಮೊದಲ ಬಾರಿ ಗೆದ್ದ ಬಿಜೆಪಿ ಶಾಸಕರೂ ಕೂಡ 100 ಕೋಟಿಗೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಬಿಜೆಪಿ ಶಾಸಕರು 50 ಕೋಟಿ ಅನುದಾನಕ್ಕೆ ಬೇಡಿಕೆಯಿಟ್ಟಿದ್ದಾರೆ.