Aug 16, 2024, 4:55 PM IST
ಚನ್ನಪಟ್ಟಣ ಉಪ ಚುನಾವಣೆಗೆ ದಿನಗಣನೆ ಬಾಕಿ ಇರುವಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 20 ವರ್ಷಗಳ ರಾಜಕೀಯ ಬದ್ಧ ವೈರಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಚನ್ನಪಟ್ಟಣ ಉಪಚುನಾವಣೆಗೆ ಮೈತ್ರಿ ಟಿಕೆಟ್ ನಾನೇ ಎಂದು ಸಿ.ಪಿ. ಯೋಗೇಶ್ವರ್ ಹೇಳಿದರೂ, ಮೈತ್ರಿ ಟಿಕೆಟ್ ಬಿಜೆಪಿಗೆ ಬಿಟ್ಟುಕೊಡಲ್ಲ ಎಂದು ದಳಪತಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ 20 ವರ್ಷಗಳ ರಾಜಕೀಯ ಬದ್ಧವೈರಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿ.ಪಿ.ಯೋಗೇಶ್ವರ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಶತ್ರವಿನ ಶತ್ರು ಜೊತೆಗೆ ಮಿತ್ರತ್ವ ಬೆಳಸಲು ಮುಂದಾದೇ ಎಂಬ ಯಕ್ಷ ಪ್ರಶ್ನೆ ಕಾಡಲಾರಂಭಿಸಿದೆ. ಚುನಾವಣೆಯಲ್ಲಿ ಯಾರು ಯಾರಿಗೆ ಖೆಡ್ಡಾ ತೋಡಿದ್ದಾರೆ ಎಂಬುದು ಉಪ ಚುನಾವಣೆ ಘೋಷಣೆಯ ನಂತರವೇ ಸ್ಪಷ್ಟವಾಗಲಿದೆ.
ಗ್ಯಾರಂಟಿ ಮೂಲಕ ಬ್ಲಾಕ್‌ಮೇಲ್: ನಿಖಿಲ್ ಕುಮಾರಸ್ವಾಮಿ ಕಿಡಿ
ದಳಪತಿ ಕೋಟೆಯಲ್ಲಿ ಕನಕಪುರ ಬಂಡೆ ಖ್ಯಾತಿಯ ಡಿಸಿಎಂ ಡಿ.ಕೆ. ಶಿವಕುಮಾರ್ 'ಸ್ವಾತಂತ್ರ್ಯ' ಚಕ್ರವ್ಯೂಹ ರಚಿಸಿದ್ದಾರೆ. ಚನ್ನಪಟ್ಟಣ ಕುರುಕ್ಷೇತ್ರ ಗೆಲ್ಲಲು ಶತ್ರುವಿನ ಶತ್ರು ಜೊತೆಗೆ ಡಿಕೆ ಶಿವಕುಮಾರ್ ಕೈ ಜೋಡಿಸುತ್ತಾರೆಂಬ ಸೂಕ್ಷ್ಮತೆ ಲಭ್ಯವಾಗುತ್ತಿದೆ. ಇನ್ನು ರಾಜಕೀಯ ರಣರಂಗದ ರಣವೈರಿಯ ಜೊತೆ ಚನ್ನಪಟ್ಟಣದ ಸೈನಿಕ ಖ್ಯಾತಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೂಲಕ ರಾಜಕೀಯ ಚದುರಂಗದಲ್ಲಿ ಯೋಗೇಶ್ವರ್ ರೋಚಕ ದಾಳವನ್ನು ಉರುಳಿಸಿದ್ದಾರೆ. ಚನ್ನಪಟ್ಟಣ ಚತುರ ಮತ್ತು ಕನಕಪುರ ಸರದಾರ ಇಬ್ಬರೂ ಎರಡು ದಶಕಗಳ ದ್ವೇಷ ಚರಿತ್ರೆ ಮರೆತರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಅಂದರೆ, ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಪ್ರಮುಖ ಕಾರಣಕರ್ತನಾಗಿದ್ದ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಈಗ ಕಾಂಗ್ರೆಸ್ ಸೇರ್ತಾರಾ? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರವನ್ನೇ ಅಳವಡಿಸಿಕೊಂಡು ದಳಪತಿಯ ಕೋಟೆಯನ್ನು ಛಿದ್ರ ಮಾಡೋದಕ್ ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆಗೆ ಕೈ ಜೋಡಿಸ್ತಾರಾ? ಎನ್ನುವುದು ಜನರ ಅನುಮಾನವಾಗಿದೆ.
ಕಾಂತಾರಕ್ಕೆ ರಾಷ್ಟ್ರ ಪ್ರಶಸ್ತಿ: 23 ವರ್ಷಗಳ ಬರ ನೀಗಿಸಿದ ರಿಷಭ್ ಶೆಟ್ಟಿ
ಚನ್ನಪಟ್ಟಣದಲ್ಲಿ ಚಕ್ರವ್ಯೂಹ ರೆಡಿಯಾಗಿರೋ ಹೊತ್ತಲ್ಲೇ ಡಿ.ಕೆ. ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಸಿ.ಪಿ ಯೋಗೇಶ್ವರ್. ಒಂದು ವೇಳೆ ದಳಪತಿ ಮತ್ತು ಸೈನಿಕ ಡಿಕೆ ವಿರುದ್ಧ ಚದುರಂಗ ಶುರು ಮಾಡಿರೋದೇ ನಿಜವಾದ್ರೆ, ಚನ್ನಪಟ್ಟಣದಲ್ಲಿ ದೋಸ್ತಿ ಟಿಕೆಟ್ ಯಾರಿಗೆ..? ಬೈ ಎಲೆಕ್ಷನ್'ನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ವರ್ ಅವ್ರೇ ಸ್ಪರ್ಧೆ ಮಾಡ್ತಾರಾ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೋಸ್ತಿ ಟಿಕೆಟ್ ನಂದೇ ಅಂತ ಸಿ.ಪಿ ಯೋಗೇಶ್ವರ್ ಹೇಳುತ್ತಿದ್ದಾರೆ. ಮತ್ತೊಂದೆಡೆ, ಜೆಡಿಎಸ್ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಅಂತ ದಳಪತಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದ್ರೆ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎಂಬುದು ನಿಗೂಢವಾಗಿದೆ. ಇಲ್ಲಿ ಯಾರು ಯಾರಿಗೆ ಖೆಡ್ಡಾ ತೋಡಿದ್ದಾರೆ ಎಂಬುದು ಉಪ ಚುನಾವಣೆ ಘೋಷಣೆಯ ಬೆನ್ನಲ್ಲೇ ರಿವೀಲ್ ಆಗುತ್ತದೆ.