ಈ ವಯಸ್ಸಿನಲ್ಲಿ, ಆರೋಗ್ಯದ ಸಮಸ್ಯೆ ನಡುವೆಯೂ ದೇವೇಗೌಡರನ್ನು ಸುತ್ತಾಡಿಸಿದ್ದು ತಪ್ಪು: ಚಲುವರಾಯಸ್ವಾಮಿ

ಈ ವಯಸ್ಸಿನಲ್ಲಿ, ಆರೋಗ್ಯದ ಸಮಸ್ಯೆ ನಡುವೆಯೂ ದೇವೇಗೌಡರನ್ನು ಸುತ್ತಾಡಿಸಿದ್ದು ತಪ್ಪು: ಚಲುವರಾಯಸ್ವಾಮಿ

Published : May 14, 2023, 12:17 PM IST

ನಮಗೆ ಇಂತಹ ವಯಸ್ಸಿನಲ್ಲಿ ನಮ್ಮ ತಂದೆ ನೋಡಿಕೊಳ್ಳುವ ಭಾಗ್ಯ ಸಿಗಲಿಲ್ಲ. ನಾನು ಆಗಿದ್ರೆ ದೇವೇಗೌಡರು ಕೂತಿದ್ದ ಕಡೆಯೇ ಅವರನ್ನು ಸುಖ, ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ.

ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ ಗೆಲುವು ಸಾಧಿಸುವ ಮೂಲಕ, ತಮ್ಮ ರಾಜಕೀಯ ವಿರೋಧಿ ಜೆಡಿಎಸ್ ಅಭ್ಯರ್ಥಿ ಸುರೇಶ್‌ಗೌಡಗೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ. ಇಂದು ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ನಮ್ಮ ತಂದೆ ಆಗಿದ್ರೆ, ಕೂತಿದ್ದ ಕಡೆ ಬಹಳ ಸುಖ, ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ. ಅವರು ನನ್ನ ವಿರುದ್ಧ ಏನು ಮಾತನಾಡಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಈ ವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆ ನಡುವೆಯೂ ಸುತ್ತಾಡಿಸಿದ್ದು ತಪ್ಪು ಎಂದು ಆದಿಚುಂಚನಗಿರಿಯಲ್ಲಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ. ಅವರು ಕೂತಿರುವ ಕಡೆ ಆಶೀರ್ವಾದ ತೆಗೆದುಕೊಂಡು ಬರಬೇಕಿತ್ತು. ಅವರು ರಾಜ್ಯ ಸುತ್ತಿದ್ದು ಸರಿಯಲ್ಲ. ಅವರನ್ನು ಸುತ್ತಿಸಿದವರಿಗೆ ದೇವರು ಬುದ್ಧಿಕೊಡಲಿ. ಅವರಿಂದ ಉಪಯೋಗ ಪಡೆದುಕೊಂಡು ಎಂಎಲ್‌ಎ, ಮಂತ್ರಿ, ಮುಖ್ಯಮಂತ್ರಿ ಎಲ್ಲ ಖಾತೆ ಅನುಭವಿಸಿದ್ದಾರೆ. ಈಗಲೂ ಅವರನ್ನು ಬಿಡಲು ತಯಾರು ಇಲ್ಲ ಎಂದು ಚಲುವರಾಯಸ್ವಾಮಿ ದೇವೇಗೌಡರನ್ನ ಹಾಡಿ ಹೊಗಳಿದ್ದಾರೆ.

ಇದನ್ನೂ ವೀಕ್ಷಿಸಿ: Karnataka Election Results 2023: ಡಿಕೆಶಿ, ಸಿದ್ದರಾಮಯ್ಯ ಇಬ್ಬರ ಮನೆ ಮುಂದೆಯೂ ಸಿಎಂ ಬ್ಯಾನರ್‌ !

21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
Read more