CM ಹುದ್ದೆ ಕನಸು ಕಾಣುತ್ತಿರುವ ಡಿಕೆಶಿಗೆ ಆಯ್ತಾ ಹಿನ್ನಡೆ..? ಪಕ್ಷದೊಳಗೆ ಹೆಚ್ಚುತ್ತಿದೆಯಾ ಮುನಿಸಿಕೊಂಡವರ ಸಂಖ್ಯೆ..?

CM ಹುದ್ದೆ ಕನಸು ಕಾಣುತ್ತಿರುವ ಡಿಕೆಶಿಗೆ ಆಯ್ತಾ ಹಿನ್ನಡೆ..? ಪಕ್ಷದೊಳಗೆ ಹೆಚ್ಚುತ್ತಿದೆಯಾ ಮುನಿಸಿಕೊಂಡವರ ಸಂಖ್ಯೆ..?

Published : Oct 20, 2023, 01:55 PM IST

ಲೋಕಸಭೆ ಎಲೆಕ್ಷನ್ ಹತ್ತಿರದಲ್ಲಿ ಡಿಕೆಶಿಗೆ ಸಾಲು ಸಾಲು ಸವಾಲುಗಳು
ಡಿಕೆಶಿ ಮೇಲೆ ಸುಮಾರು 75 ಕೋಟಿ ಅಕ್ರಮ ಆಸ್ತಿ ಗಳಿಕೆ ಆರೋಪ 
ತನಿಖೆ ವೇಳೆ 200ಕೋಟಿ ಅಧಿಕ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದ ಸಿಬಿಐ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲಿದ್ದ ಅಕ್ರಮ ಆಸ್ತಿ ಪ್ರಕರಣದ ಕುರಿತಾಗಿ, ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಮೂಲಕ ಡಿಕೆಶಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಲೋಕಸಭೆ(Loksabha) ಎಲೆಕ್ಷನ್ ಸಂದರ್ಭದಲ್ಲಿ ಡಿಕೆಶಿ ಇದು ಹಿನ್ನಡೆಯಾದ್ರೂ ಆಗಬಹುದು. ಡಿಕೆಶಿಗೆ ಇದೊಂದೇ ಅಲ್ಲ, ಕಳೆದ ಕೆಲವು ದಿನಗಳಿಂದ ಒಂದರ ಹಿಂದೊಂದು ಸಂಕಷ್ಟಗಳು ಎದುರಾಗುತ್ತಿವೆ. ಡಿಕೆಶಿ(DK Shivakumar) ಅವರ ಮೇಲೆ ಈ ಹಿಂದೆ ಸಿಬಿಐ ದಾಳಿಯಾಗಿತ್ತು. ದಾಳಿ ಸಂದರ್ಭದಲ್ಲಿ ಡಿಕೆಶಿ ಅವರ ಬಳಿ ಅಕ್ರಮ ಆಸ್ತಿ ಇರುವುದಾಗಿ ಸಿಬಿಐ ತನ್ನ ಎಫ್ಐಆರ್‌ನಲ್ಲಿ ಉಲ್ಲೇಖಿಸಿತ್ತು. 2014 ರಿಂದ 2018ರ ವರೆಗೆ ಡಿಕೆಶಿ ಅವರ ಆಸ್ತಿ ಗಳಿಕೆ ಬಗ್ಗೆ ಸಿಬಿಐ(CBI) ಅನುಮಾನ ವ್ಯಕ್ತ ಪಡಿಸಿತ್ತು. ಈ ಅವಧಿಯಲ್ಲಿ ಡಿಕೆಶಿ ಆಸ್ತಿ ಗಳಿಕೆಯಲ್ಲಿ ಭಾರಿ ಅಕ್ರಮ ನಡೆದಿರುವ ಕುರಿತು ಸಿಬಿಐ ತನ್ನ ಕೇಸ್ನಲ್ಲಿ ದಾಖಲಿಸಿತ್ತು. ಈ ಕುರಿತು ವಿಚಾರಣೆ ನಡೆಯುವಾಗ ಕೆಲ ದಿನಗಳ ಕಾಲ ಡಿಕೆಶಿ ದೆಹಲಿ ಜೈಲಿನಲ್ಲೂ ಇರಬೇಕಾಗಿತ್ತು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ವಿರುದ್ಧದ ಎಫ್ಐಆರ್(FIR) ಅನ್ನು ರದ್ದುಗೊಳಿಸುವಂತೆ ಕೆಲ ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಸಿಬಿಐ ಅವರು ತಯರಿಸಿರುವ ಎಫ್ಐಆರ್ನಲ್ಲಿ  ಯಾವುದೇ ಹುರುಳಿಲ್ಲ. ಹೀಗಾಗಿ ಅದನ್ನು ರದ್ದು ಪಡಿಸಿಸಬೇಕೆಂದು ಹೈಕೋರ್ಟ್ಗೆ ಅಪೀಲ್ ಮಾಡಿದ್ದರು ಡಿಕೆಶಿ. ಆದ್ರೆ ಡಿಕೆಶಿ ಅವರ ಅರ್ಜಿಯನ್ನು ಇಂದು ಹೈಕೋರ್ಟ್ ತಿರಸ್ಕರಿಸಿದೆ. 

ಇದನ್ನೂ ವೀಕ್ಷಿಸಿ: News Hour: ಕಾಂಗ್ರೆಸ್‌ನಲ್ಲಿ ಶುರುವಾಯ್ತು ಮತ್ತೆ ಬೆಳಗಾವಿ ಬೆಂಕಿ, ಜಾರಕಿಹೊಳಿ ಪವರ್‌ಗೆ ಡಿಕೆ ಡಿಚ್ಚಿ!

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more