Jan 24, 2020, 7:47 PM IST
ಬೆಂಗಳೂರು, [ಜ.24]: 5 ದಿನಗಳ ಕಾಲ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ವಾಪಸ್ಸಾಗಿದ್ದಾರೆ. ಕರ್ನಾಟಕಕ್ಕೆ ಕಾಲಿಡುತ್ತಲೇ ಸಂಪುಟ ವಿಸ್ತರಣೆ ತಲೆನೋವು ಶುರುವಾಗಿದೆ.
ದಾವೋಸ್‌ನಿಂದ ಬೆಂಗ್ಳೂರಿಗೆ ಕಾಲಿಡುತ್ತಿದ್ದಂತೆಯೇ ಗುಡ್ ನ್ಯೂಸ್ ಕೊಟ್ಟ ಬಿಎಸ್‌ವೈ
ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆಯಾದರೂ ಇದನ್ನು ಈಡೇರಿಸಲು ಬಿಎಸ್‌ವೈಗೆ ಸವಾಲಾಗಿದೆ. ವರಿಷ್ಠರು ಸದ್ಯ ಆರು ಜನ ಅರ್ಹ ಶಾಸಕರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡಿ ಎಂಬ ಸುದ್ದಿ ಬಿಎಸ್ ವೈ ಗೆ ನುಂಗಲಾರದ ತುತ್ತಾಗಿದೆ.
ದಾವೋಸ್ ಸಂಭ್ರಮದ ಬಳಿಕ, ಸಿಎಂಗೆ ಈಗ ಸಂಪುಟ ಸಂಕಷ್ಟು ಎದುರಾಗಿದೆ. ವಾರದೊಳಗಾದರೂ ಎಲ್ಲಾ ಗೊಂದಲಕ್ಕೆ ತೆರೆ ಬೀಳಬಹುದು ಅನ್ನೋ ನಿರೀಕ್ಷೆ ಇದೆ.