ಬೆಂಗಳೂರಿನ ಇಬ್ಬರು ಸಚಿವರಿಗೆ ಗದರಿದ ಬಿಎಲ್ ಸಂತೋಷ್; ಫುಲ್ ಕ್ಲಾಸ್

Jul 16, 2022, 4:05 PM IST

ಬೆಂಗಳೂರು (ಜು.16): ಮುಂಬರುವ  ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿಯನ್ನು ಬಲಗೊಳಿಸುವ ಕಾರ್ಯಕ್ಕೆ ಕೈ ಹಾಕಿರುವ ಹೈಕಮಾಂಡ್ ನೆನ್ನೆ ನಗರದ ಹೊರವಲಯದಲ್ಲಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ಚಿಂತನ ಮಂಥನ ಸಭೆ ನಡೆಸಿತು.‌ ಸಭೆಯಲ್ಲಿ ಸಚಿವರು, ಪ್ರಮುಖ ಶಾಸಕರು, ಪದಾಧಿಕಾರಿಗಳು ಸೇರಿ ಒಟ್ಟು 50 ಜನ ಭಾಗಿ ಆಗಿದ್ರು. ಸಭೆಯ ನೇತೃತ್ವ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಿತು. 

ಹಳೇ ಮೈಸೂರಿನಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಪ್ಲಾನ್, ಶಾಸಕರಿಗೆ 1+1 ಟಾಸ್ಕ್

ಜೊತೆಗೆ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಉಸ್ತುವಾರಿ ಅರುಣ್ ಸಿಂಗ್ ಇದ್ದರು. ಇನ್ನುಳಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸೇರಿ ಕೋರ್ ಕಮಿಟಿ ಸದಸ್ಯರು ಭಾಗಿ ಆಗಿದ್ರು.‌ ಈ ಸಭೆಯಲ್ಲಿ ಬಿಎಲ್ ಸಂತೋಷ್ ಅನೇಕ ವಿಚಾರಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.‌