ಎಲೆಕ್ಷನ್ ಹೊತ್ತಲ್ಲೇ ನಡೀತಿವೆ ಸಾಲು ಸಾಲು ಎಡವಟ್ಟುಗಳು, ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದೇಕೆ ಕಮಲಪಡೆ.?

Mar 20, 2024, 10:54 AM IST

ಬೆಂಗಳೂರು(ಮಾ.20):  ಎಲೆಕ್ಷನ್ ಹೊತ್ತಲ್ಲೇ ರಾಜ್ಯದಲ್ಲಿ ನಡೀತಿವೆ ಸಾಲು ಸಾಲು ಎಡವಟ್ಟುಗಳು. ರಾಮೇಶ್ವರಂ ಕೆಫೆ ಬಾಂಬ್‌ನಿಂದ ನಗರ್ತಪೇಟೆ ಹೋರಾಟದವರೆಗೆ ಆಗಿದ್ದೇನೇನು ಗೊತ್ತಾ?. ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದಿರೋದೇಕೆ ಕಮಲಪಡೆ.? ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರುತ್ತವಾ, ರಾಜ್ಯದಲ್ಲಾಗ್ತಾ ಇರೋ ಘಟನೆಗಳು..?  ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಹನುಮಾನ್ ಚಾಲೀಸ್‌ ರಣರಂಗ..!

ಬಿಜೆಪಿ ನಾಯಕರಂತೂ ಈ ಘಟನೆನಾ ಹಾದಿ ತಪ್ಪಿಸೋಕೆ ಕಾಂಗ್ರೆಸ್ ಏನು ಮಾಡ್ಬೇಕೋ ಅದನ್ನ ಮಾಡೇ ಮಾಡುತ್ತೆ ಅಂತ ಹೇಳ್ತಿದ್ದಾರೆ. ಆದ್ರೆ ಈ ಬಗ್ಗೆ ಕಾಂಗ್ರೆಸ್ ನಾಯಕರ ಮಾತೇನು?. ಬೆಂಗಳೂರಿನ ಒಂದು ಏರಿಯಾದ ಘಟನೆ, ಇಡೀ ರಾಜ್ಯದಲ್ಲಿ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿದೆ. ಹನುಮಾನ್ ಚಾಲೀಸ್‌ ಹಾಕಿದ್ದಕ್ಕೆ ಅಮಾಯಕನ ಮೇಲೆ ಹಲ್ಲೆಯಾಗುತ್ತೆ ಅನ್ನೋದಾದ್ರೆ, ಸಾರ್ವಜನಿಕರು ಅದೆಷ್ಟರ ಮಟ್ಟಿಗೆ ಸುರಕ್ಷಿತರಾಗಿದ್ದಾರೆ ಅನ್ನೋ ಪ್ರಶ್ನೆ ಜನರನ್ನ ಕಾಡ್ತಾ ಇದೆ. ಇದಕ್ಕೆ ಉತ್ತರ ಏನು?.

LRC: ಅಜಾನ್‌ ಟೈಮ್‌ನಲ್ಲಿ ಹನುಮಾನ್‌, ಮುಸ್ಲಿಂ ಪುಂಡರಿಂದ ನಗರ್ತಪೇಟೆ ಉದ್ವಿಗ್ನ!

ಇದು ಸಾದಾಸೀದಾ ಸಮಯ ಅಲ್ಲ.. ಸಂಗ್ರಾಮದ ಸಮಯ.. ಲೋಕಸಮರ ನಡೆಯೋಕೆ ದಿನಗಣನೆ ಶುರುವಾಗಿದೆ.. ಈ ಹೊತ್ತಿನಲ್ಲಿ ಒಂದೊಂದು ಹೇಳಿಕೆಯೂ, ಒಂದೊಂದು ಘಟನೆಯೂ ದೊಡ್ಡ ತಿರುವು ನೀಡ್ತಾವೆ.. ಇಂಥಾ ಸಂದರ್ಭದಲ್ಲಿ ನಡೆದಿರೋ ನಗರ್ತಪೇಟೆಯ ಘಟನೆ, ರಾಜಕೀಯ ಪ್ರಭಾವ ಬೀರುತ್ತಾ..? ಎಂಬುದನ್ನ ಕಾದುನೋಡಬೇಕಿದೆ.