Sep 25, 2023, 2:35 PM IST
ಕಾಂಗ್ರೆಸ್ ರಾಜ್ಯ ನಾಯಕರ ಕಾನ್ಫಿಡೆನ್ಸ್ ಹೇಗಿದೆ ಅಂತ..? ಕರ್ನಾಟಕ ವಿಧಾನಸಭಾ ಚುನಾವಣೇಲಿ ಅಮೋಘ ಜಯಭೇರಿ ಬಾರಿಸಿರೋ ಕಾಂಗ್ರೆಸ್, ಮುಂದಿನ ಲೋಕಸಭೆಯಲ್ಲಿ ಅದ್ಭುತ ಸೃಷ್ಟಿಸೋ ಕನಸು ಕಾಣ್ತಾ ಇದೆ. ಶತಾಯಗತಾಯ 20 ಕ್ಷೇತ್ರಗಳನ್ನ ಗೆದ್ದುಬೀಗೋಕೆ ಸಜ್ಜಾಗಿದೆ. ಆದ್ರೆ, ಕಾಂಗ್ರೆಸ್‌ನ(Congress) ಈ ಕನಸು ನುಚ್ಚುನೂರು ಮಾಡೋಕೆ, ರಾಷ್ಟ್ರ ರಾಜಧಾನಿಯಲ್ಲೊಂದು ಮೈತ್ರಿ ಯಜ್ಞನವೇ ನಡೆದಿದೆ. ಲೋಕಸಭೆಯಲ್ಲಿ 20ರ ಟಾರ್ಗೆಟ್ ಫಿಕ್ಸ್ ಮಾಡಿ ಮುನ್ನುಗ್ತಾ ಇರೋ ಕಾಂಗ್ರೆಸ್‌ನ ಅಶ್ವಮೇಧದ ಕುದುರೆಯನ್ನ ಕಟ್ಟಿ ಹಾಕೋಕೆ, ಬಿಜೆಪಿ(BJP) ಜೆಡಿಎಸ್(JDS) ಮೈತ್ರಿ ಮಾಡ್ಕೊಂಡಿದ್ದಾವೆ. ಇದು ಶತ್ರುವಿನ ಶತ್ರು ಮಿತ್ರ ಅನ್ನೋ ಸೂತ್ರದಡಿ ಹೆಣೆಯಲಾಗಿರೋ ರೋಚಕ ಮೈತ್ರಿ ರಣವ್ಯೂಹ. ಈ ಹಿಂದೆ, ಅಂದ್ರೆ 2006ರಲ್ಲಿ ಇದೇ ದೋಸ್ತಿ ಕಾಂಗ್ರೆಸ್‌ಗೆ ದೊಡ್ಡ ಕಂಟಕವಾಗಿತ್ತು. ಆ ಬಳಿಕ ಈಗ ಮತ್ತೆ ಬಿಜೆಪಿ ಜೊತೆ ದೋಸ್ತಿ ಮಾಡ್ಕೊಂಡಿರೋ ದಳಪತಿಗಳು ಲೋಕಸಭಾ ಚುನಾವಣೆಯನ್ನ(Loksabha Election) ಮೈತ್ರಿಕೂಟದೊಂದಿಗೆ ಎದುರಿಸಲು ರೆಡಿಯಾಗಿದ್ದಾರೆ. ದಳಪತಿಗಳು ಅಧಿಕೃತವಾಗಿ ಎನ್.ಡಿ.ಎ ಮೈತ್ರಿಕೂಟ ಸೇರಿದ್ದಾರೆ. ಆ ಕಡೆ ಕಾಂಗ್ರೆಸ್ ಹಾಗೂ ಉಳಿದ ಪಕ್ಷಗಳು ಮೈತ್ರಿ ಮಾಡ್ಕೊಂಡು. ಕಮಲಪಾಳಯದ ಕೇಸರಿ ಕೋಟೆಗೆ ಮುತ್ತಿಗೆ ಹಾಕೋಕೆ ನೋಡ್ತಿದ್ದಾವೆ. ಆದ್ರೆ ರಾಜ್ಯದಲ್ಲಿ ಹಸ್ತ ಪಾಳಯದ ಅಶ್ವಮೇಧಕ್ಕೆ ಸಡ್ಡು ಹೊಡೆಯೋಕೆ, ಕಮಲಪಡೆ ಹಾಗೂ ದಳಪತಿಗಳ ಸೇನೆ ನಡುವೆ ಮಹಾಮೈತ್ರಿ ಉಂಟಾಹಿದೆ.. ಎನ್.ಡಿ.ಎ ಮೈತ್ರಿಕೂಟದ ಜೊತೆ ಸೇರಿ, ಜೆಡಿಎಸ್ ಹೊಸ ಆಟ ಶುರು ಮಾಡ್ಕೊಂಡಿದೆ.
ಇದನ್ನೂ ವೀಕ್ಷಿಸಿ: ಆಪರೇಷನ್ ಲಾಡೆನ್ ಬಗ್ಗೆ ಪ್ರಸ್ತಾಪ ಬಂದಿದ್ದೇಕೆ..? ಅಮೆರಿಕಾದಂತೆ ವರ್ತಿಸಿತಾ ಭಾರತ..?