Sep 15, 2023, 3:46 PM IST
ಹುಲಿ ನಾಲ್ಕು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೆ ಬೇಟೆಗೆ ಹೊಂಚು ಹಾಕ್ತಾ ಇದೆ ಅಂತಾನೇ ಅರ್ಥ. ಆದ್ರೆ ಇಲ್ಲಿ ಹೆಜ್ಜೆ ಹಿಂದಿಟ್ಟಿರೋದು ಹುಲಿಯಲ್ಲ, ರಾಜಾಹುಲಿ. ರಾಜ್ಯ ರಾಜಕಾರಣದಲ್ಲೀಗ ದೊಡ್ಡ ಸದ್ದು ಮಾಡ್ತಿರೋ ಸುದ್ದಿ ಒಂದೇ. ಅದು ಕಮಲದಳ ಜೋಸ್ತಿ. ಬಿಜೆಪಿ (BJP) ಮತ್ತು ಜೆಡಿಎಸ್(JDS) ಮುಂದಿನ ಲೋಕಸಭಾ ಚುನಾವಣೆಯನ್ನು(Loksabha Election) ಮೈತ್ರಿಯೊಂದಿಗೆ ಎದುರಿಸಲು ರೆಡಿಯಾಗ್ತಾ ಇವೆ. ಇನ್ನೇನು ದೋಸ್ತಿ ಕುದುರಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ಮೈತ್ರಿಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ದೋಸ್ತಿ ವಿಚಾರದಲ್ಲಿ ಮುಂದಡಿ ಇಟ್ಟಿದ್ದ ರಾಜಾಹುಲಿ ಈಗ ನಾಲ್ಕು ಹೆಜ್ಜೆ ಹಿಂದಿಟ್ಟಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ (Congress)ರಣೋತ್ಸಾಹದಲ್ಲಿ ಮುನ್ನುಗ್ತಾ ಇದೆ. ಗ್ಯಾರಂಟಿಗಳನ್ನೇ ಅಸ್ತ್ರ ಗುರಾಣಿಯಾಗಿಸಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗ್ತಾ ಇದೆ. ಅತ್ತ ಕಡೆ ಈಗಾಗ್ಲೇ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರೋ ಬಿಜೆಪಿ ಮತ್ತು ಜೆಡಿಎಸ್, ಲೋಕಸಮರವನ್ನು ಒಟ್ಟಾಗಿ ಎದುರಿಸಲು ಪ್ಲಾನ್ ಮಾಡ್ತಿವೆ. ದೋಸ್ತಿಯೊಂದಿಗೆ ಕೈ ಜೊತೆ ಕುಸ್ತಿಯಾಡಲು "ಕಮಲದಳ" ನಾಯಕರು ಮಾಸ್ಟರ್'ಪ್ಲಾನ್ ಹೆಣೆದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರೇ ಈ ಮೈತ್ರಿ ರಾಜನೀತಿಯ ರಿಯಲ್ ಮಾಸ್ಟರ್'ಮೈಂಡ್. ಇನ್ನೇನು ದೋಸ್ತಿ ಕುದುರಿ ಬಿಡ್ತು, ಅಧಿಕೃತ ಘೋಷಣೆಯೊಂದೇ ಬಾಕಿ ಅನ್ನೋ ಹೊತ್ತಲ್ಲಿ ಅಸಲಿ ಆಟ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಘಟಬಂಧನ್ ವಿರುದ್ಧ ಪ್ರಧಾನಿ ರಣಕಹಳೆ! ಸನಾತನ ಪರಂಪರೆ ಘನತೆ ವಿವರಿಸಿದ ಪ್ರಧಾನಿ!