ಬಿಜೆಪಿ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲಿವೆ ಎನ್ನಲಾಗ್ತಿದ್ದು, ಇದರಿಂದ ಯಾರಿಗೆ ಲಾಭ-ನಷ್ಟ ಆಗಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ(BJP) ಮತ್ತು ಜೆಡಿಎಸ್(JDS) ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಫಿಕ್ಸ್ ಎನ್ನಲಾಗ್ತಿದೆ. ಸ್ಥಾನ ಹಂಚಿಕೆ ಬಗ್ಗೆ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದನ್ನು ಸ್ಥಳೀಯ ನಾಯಕರು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ಸಹ ಕಾಡುತ್ತದೆ. ಇನ್ನೂ ಇತಿಹಾಸವನ್ನು ನೋಡಿದ್ರೆ, ಬಿಜೆಪಿ ಚುನಾವಣಾ ಪೂರ್ವ ಮೈತ್ರಿ(Pre-election alliance) ಮಾಡಿಕೊಂಡಿರುವುದು ಬಹಳ ಕಡಿಮೆ. ಈ ತಿಂಗಳ 18 ರಂದು ಅಂದರೆ ಮಂಗಳವಾರ ದೆಹಲಿಯಲ್ಲಿ ಎನ್‌ಡಿಎ ಒಕ್ಕೂಟಗಳ ಸಭೆ(NDA Meeting) ನಡೆಯಲಿದೆ. ಈ ಸಭೆಗೆ ಜೆಡಿಎಸ್‌ನ್ನು ಆಹ್ವಾನಿಸುವ ಬಗ್ಗೆಯೂ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡೂ ಪಕ್ಷಗಳ ಮೈತ್ರಿಗೆ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಭಿನ್ನರಾಗಗಳು ಕೇಳಿ ಬರುತ್ತಿವೆ.
ಇದನ್ನೂ ವೀಕ್ಷಿಸಿ: ಲೋಕಸಭಾ ಚುನಾವಣೆಗೂ ಗಣಿನಾಡಲ್ಲಿ ಹೈವೋಲ್ಟೇಜ್ ಕದನ: ಶ್ರೀರಾಮು V/S ನಾಗೇಂದ್ರ ಫೈಟ್ ಪಕ್ಕನಾ..?