ಕಮಲಕ್ಕೆ ದಳ ಬೇಕೋ..? ದಳಕ್ಕೆ ಕೇಸರಿಯೋ..? ಬಿಜೆಪಿ ಮೇಲೆ ಮೃದುಧೋರಣೆ ತೋರಿದ್ದೇಕೆ ದೊಡ್ಡ ಗೌಡರು..?

Sep 9, 2023, 2:06 PM IST

ಮುಂದಿನ ಲೋಕಸಭಾ ಚುನಾವಣೆಗೆ (Loksabha) ದಿನಗಳು ಹತ್ತಿರವಾಗ್ತಾ ಇದೆ. ಕಳೆದ ಬಾರಿ ಕರ್ನಾಟಕದಲ್ಲಿ ಕಮಾಲ್ ಮಾಡಿದ್ದ ಭಾರತೀಯ ಜನತಾ ಪಕ್ಷ ಈ ಬಾರಿಯೂ ಕೂಡ ದೊಡ್ಡದೊಂದು ಗುರಿಯನ್ನ ಹಾಕಿಕೊಂಡು ಮೋದಿಯನ್ನ ಗೆಲ್ಲಿಸೋಕೆ ಪಣ ತೊಟ್ಟಿದೆ. ಸ್ಟ್ರಾಟಜಿಯ ಭಾಗವಾಗಿ ಹೊಸದೊಂದು ಸುದ್ದಿ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅದೇ ಬಿಜೆಪಿ(BJP) ಹಾಗೂ ಜೆಡಿಎಸ್(JDS) ಮಹಾಮೈತ್ರಿ ಅನ್ನೋದು. ಮೈತ್ರಿಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ತುಂಬಾ ಹಿಂದೆಯೇ ಸುದ್ದಿ ಬ್ರೇಕ್ ಮಾಡಿತ್ತು. ಈಗ ಇರೋದು ಅದರ ಅಪ್ಡೇಟೆಡ್ ವರ್ಷನ್. ವಿಧಾನಸಭೆಯ ಮಹಾ ಗೆಲುವಿನೊಂದಿಗೆ ಕಾಂಗ್ರೆಸ್ (Congress) ಲೋಕಸಭೆಯನ್ನೂ ಕಬ್ಜ ಮಾಡಿಕೊಳ್ಳೋ ಆಲೋಚನೆಯಲ್ಲಿದೆ. ಆದ್ರೆ ಶಾಕಿಂಗ್ ಅನ್ನೋ ಹಾಗೇ ಕಳೆದ ಬಾರಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಲೋಕಸಭೆಯನ್ನ ಎದುರಿಸಿದ್ದ ಜೆಡಿಎಸ್ ಈ ಬಾರಿ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳೋದು ಬಹುತೇಕ ಪಕ್ಕಾ. ಈ ನಿಟ್ಟಿನಲ್ಲಿ ಹೈಕಮಾಂಡ್ ಲೆವಲ್ ಮೀಟಿಂಗ್ ಆಗಿರೋದು ವಿಶೇಷ.ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಡೆಸಿವೆ. ಸ್ಥಾನ ಹಾಗೂ ಕ್ಷೇತ್ರ ಹೊಂದಾಣಿಕೆ ಅಂತಿಮ ಹಂತಕ್ಕೆ ಬಂದಿದ್ದು ಒಂದೆರಡು ಕ್ಷೇತ್ರದ ಬಗ್ಗೆ ಗೊಂದಲ ಬಗೆಹರಿಯಬೇಕಿದೆ. ಒಂದೆರಡು ದಿನದಲ್ಲಿ ಆ ಗೊಂದಲಗಳೂ ತಿಳಿಯಾಗಿ ಅಧಿಕೃತ ಮೈತ್ರಿ ಘೋಷಣೆಯಾಗಲಿದೆ.

ಇದನ್ನೂ ವೀಕ್ಷಿಸಿ:  ದೇಶ ಕಟ್ಟಲು ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ: ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ