Oct 13, 2021, 12:44 PM IST
ಬೆಂಗಳೂರು(ಅ.13): ನಿಮ್ಮ ಭ್ರಷ್ಟಾಧ್ಯಕ್ಷನ ಹಣ ಸಂಪಾದನೆಯ ಮಾರ್ಗ ಯಾವುದು ಅಂತ ವಿ.ಎಸ್. ಉಗ್ರಪ್ಪ, ಸಲೀಂ ಅವರೇ ಸ್ಪಷ್ಟಪಡಿಸಿದ್ದಾರೆ ಅಂತ ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುವ ನೀವು ಡಿ.ಕೆ. ಶಿವಕುಮಾರ್ ಹಣ ಸಂಪಾದನೆಯ ಮಾರ್ಗ ಯಾವುದು ಅಂತ ನೀವೇ ಸ್ಪಷ್ಟನೆ ನೀಡಿ ಅಂತ ಬಿಜೆಪಿ ಒತ್ತಾಯ ಮಾಡಿದೆ. ಡಿಕೆಶಿ ವಿರುದ್ಧ ಕಾಂಗ್ರೆಸ್ಸಿಗರಿಂದಲೇ ಕಲೆಕ್ಷನ್ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಿರಿಕಾರಿದೆ.
ನನ್ನ ಅನ್ನ ತಿಂದು ನನಗೇ ಬೈತಿರಾ?: ಉಗ್ರಪ್ಪ, ಸಲೀಂಗೆ ಡಿಕೆಶಿ ಕ್ಲಾಸ್!