Dec 11, 2024, 3:26 PM IST
ಸಂಸತ್ ಅಧಿವೇಶನದ 12ನೇ ದಿನವೂ ಯಾವುದೇ ಜನಪರ ಚರ್ಚೆಯಿಲ್ಲದೇ ಹಾಳಾಗಿದೆ. ಕಾಂಗ್ರೆಸ್ ಅದಾನಿ ಆರೋಪದ ವಿರುದ್ಧ ತನಿಖೆಗೆ ಆಗ್ರಹಿಸಿದ್ದು, ಸಂಸತ್ ಮುಂದೆ ಪ್ರತಿಭಟನೆ ನಡೆಸುತ್ತಿದೆ. ಆದರೆ ಎಸ್ಪಿ, ಟಿಎಂಸಿ ಪಕ್ಷಗಳು ಕಾಂಗ್ರೆಸ್ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿವೆ. ಆದರೆ ಕಾಂಗ್ರೆಸ್ ಮಾತ್ರ ಅದಾನಿ ವಿಚಾರ ಚರ್ಚೆಯಾಗಲೇಬೇಕು ಎಂದು ಪಟ್ಟು ಹಿಡಿದಿದೆ. ಕಾಂಗ್ರೆಸ್ನ ಅದಾನಿ ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಜಾರ್ಜ್ ಸೊರೋಸ್ ಅಸ್ತ್ರ ಹೊರತೆಗೆದಿದೆ. ದೇಶ ವಿರೋಧಿ ಶಕ್ತಿಗಳ ಜತೆ ಕಾಂಗ್ರೆಸ್ಗೆ ನಂಟು ಎಂದು ಬಿಜೆಪಿ ಆರೋಪಿಸಿದ್ದು, ನೇರವಾಗಿ ಸೋನಿಯಾ ಗಾಂಧಿ ವಿರುದ್ಧವೇ ಬಿಜೆಪಿ ಆರೋಪ ಮಾಡಿದೆ. ಮೋದಿ ಸರ್ಕಾರ ಅಸ್ಥಿರಕ್ಕೆ ವಿದೇಶಿ ಶಕ್ತಿಗಳ ಜತೆ ಕಾಂಗ್ರೆಸ್ ಕೈ ಜೋಡಿಸಿಸಿದ ಆರೋಪವನ್ನು ಮಾಡಿದೆ. ಇದೆಲ್ಲದರ ಮಾಹಿತಿ ಈ ವೀಡಿಯೋದಲ್ಲಿದೆ ವೀಕ್ಷಿಸಿ...