vuukle one pixel image

ರಾಜ್ಯದ ನೂತನ ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬ: ರೇಸ್‌ನಲ್ಲಿ ಹಲವರು, ಯಾರಾಗ್ತಾರೆ ನಾಯಕ ?

Jun 19, 2023, 9:39 AM IST

ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಈಗ ಮತ್ತೆ ಹೊಸ ಟೆನ್ಷನ್‌ ಶುರುವಾಗಿದೆ. ರಾಜ್ಯದ ನೂತನ ಪ್ರತಿಪಕ್ಷ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಇದಕ್ಕೆ ವಿಳಂಬವಾಗುತ್ತಿದ್ದು, ಸಹಮತ ಸಿಕ್ಕಿಲ್ಲ. ಹೊಸ ಸರ್ಕಾರದ ನೇತೃತ್ವದಲ್ಲಿ ಜಂಟಿ ಅಧಿವೇಶನ ನಡೆಯಲು ಇನ್ನು 15 ದಿನ ಮಾತ್ರ ಬಾಕಿ ಇದೆ. ಪ್ರತಿಪಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಹಲವರು ಯತ್ನ ಮಾಡುತ್ತಿದ್ದಾರೆ. ದೆಹಲಿಯಿಂದಲೇ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹಾಗಾಗಿ ಯಾರು ಆಗ್ತಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿದ್ದು ಸರ್ಕಾರವನ್ನು ಕಟ್ಟಿ ಹಾಕಲು ಆದಷ್ಟು ಬೇಗ ಪ್ರತಿಪಕ್ಷ ನಾಯಕನ ಆಯ್ಕೆ ಆಗಲೇಬೇಕಾಗಿದೆ. 

ಇದನ್ನೂ ವೀಕ್ಷಿಸಿ: ಛಬ್ಬಿಯಲ್ಲಿ ಬೃಹತ್‌ ಹೈಸ್ಕೂಲ್‌ ಕಟ್ಟಡ ನಿರ್ಮಾಣ: ಭೂಮಿ ಪೂಜೆ ನೆರವೇರಿಸಿದ ಬೊಮ್ಮಾಯಿ, ನಟ ರಿಷಬ್‌ ಶೆಟ್ಟಿ