ಕೇರಳ ಬಳಿಕ ಕರ್ನಾಟಕಕ್ಕೆ ಭಾರತ್ ಜೋಡೋ: ಕಾಂಗ್ರೆಸ್ಸಿಗೆ ಎಷ್ಟೊಂದು ಬ್ಯಾಡ್ ನ್ಯೂಸ್!

Sep 14, 2022, 10:17 PM IST

ನವದೆಹಲಿ (ಸೆ. 14): 2024ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಆರಂಭಿಸಿರುವ 150 ದಿನಗಳ ಪಾದಯಾತ್ರೆ ವೇಳೆ ಮಳೆಯನ್ನೂ ಲೆಕ್ಕಿಸದೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹಾಗೂ ಇತರ ನಾಯಕರು ಹೆಜ್ಜೆ ಹಾಕುತ್ತಿದ್ದಾರೆ.  ‘ಕಾಲುಗಳಲ್ಲಿ ಬೊಬ್ಬೆ ಬಂದರೂ ಪರವಾಗಿಲ್ಲ. ನಾವು ದೇಶವನ್ನು ಒಗ್ಗೂಡಿಸುವುದನ್ನು ಬಿಡುವುದಿಲ್ಲ. ನಾವು ನಿಲ್ಲುವುದಿಲ್ಲ. ದ್ವೇಷ, ಹಿಂಸೆ ಮತ್ತು ಕೋಪದ ಮೂಲಕ ಚುನಾವಣೆಗಳನ್ನು ಗೆಲ್ಲಬಹುದು. ಆದರೆ ಇವು ದೇಶ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡುವುದಿಲ್ಲ ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 

ಇನ್ನು  ಭಾರತ್‌ ಜೋಡೋ ಯಾತ್ರೆ (Bharat Jodo Yatra) ರಾಜ್ಯದ ಬಳ್ಳಾರಿಗೆ ಬಂದಾಗ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ಯಾತ್ರೆ ಅವಧಿಯಲ್ಲಿ ಕರ್ನಾಟಕದಲ್ಲಿ ಪಕ್ಷದಿಂದ ನಡೆಯಲಿರುವ ಏಕೈಕ ಸಮಾವೇಶವಾಗಿದೆ. ಈ ನಡುವೆ ಕಾಂಗ್ರೆಸ್ಸಿಗೆ ಸಾಕಷು ಸಂಕಷ್ಟಗಳು ಎದುರಾಗಿವೆ.  ಕೇರಳ ಮುಗಿಸಿ ಸೆಪ್ಟೆಂಬರ್‌ 30ಕ್ಕೆ ಕರ್ನಾಟಕಕ್ಕೆ ಪಾದಯಾತ್ರೆ ಕಾಲಿಡುತ್ತಿದೆ.  ಆದರೆ ಸಿದ್ದರಾಮಯ್ಯ-ಡಿಕೆಶಿ ಮುನಿಸು ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಇತ್ತ ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಎಲ್ಲದರ ಕುರಿತ ಲೆಫ್ಟ್‌ ರೈಟ್‌ ಸೆಂಟರ್‌ ಚರ್ಚೆ ಇಲ್ಲಿದೆ 

ಮತ್ತೆ ಅಸಮಾಧಾನ ಸ್ಫೋಟ: ಭಾರತ್ ಜೋಡೋ ಸಭೆಗೆ ತೆರಳಲು ಸಿದ್ದರಾಮಯ್ಯ ನಿರಾಕರಣೆ