Oct 8, 2022, 5:10 PM IST
ಬೆಂಗಳೂರು (ಅ.8): ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಸಿದ್ದು ಜೋಡಿ ಓಟ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್'ಗೆ ಇ.ಡಿ ಸಂಕಟ..! ಇಲ್ಲಿ ಸಿದ್ದು-ರಾಹುಲ್ ಓಟದ ಆಟ, ಕನಕಪುರ ಬಂಡೆಗೆ ಇ.ಡಿ ಕಚೇರಿಯಲ್ಲಿ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿತ್ಉತ. ಪ್ಲಾನ್ ಆಫ್ ಆ್ಯಕ್ಷನ್ ಡಿಕೆಯದ್ದು, ಮಿರ ಮಿರ ಮಿಂಚಿಂದ್ದು ಮಾತ್ರ ಟಗರು ಸಿದ್ದು!
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಡ್ಯದಲ್ಲಿ ಬೀಸಲಿದೆ ಅಂತ ಹೇಳಿದ್ದು ಅದ್ಯಾವ ಗಾಳಿಯ ಬಗ್ಗೆ..? ಆ ಗಾಳಿಗೂ ರಾಹುಲ್ ಗಾಂಧಿ ಜೊತೆ ಚುಂಚನಗಿರಿ ಮಠಕ್ಕೆ ಹೋಗೋದಕ್ಕೂ ಏನ್ ಸಂಬಂಧ..? ಡಿಕೆ ಶಿವಕುಮಾರ್ ಹೆಣೆದಿದ್ದ ತಂತ್ರಗಾರಿಕೆಗೆ ಕೊನೆಗೂ ಯಶಸ್ಸು ಸಿಕ್ಕಿತಾ ಅನ್ನೋ ಅನುಮಾನ ಕಾಡಿದೆ.
ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ ಡಿಕೆಶಿ
ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಅನ್ನೋ ಮಾತಿದೆ. ಕಾಂಗ್ರೆಸ್ ಕಟ್ಟಪ್ಪ ಡಿಕೆ ಶಿವಕುಮಾರ್ ವಿಚಾರದಲ್ಲಿ ಈ ಮಾತು ಸಾಕಷ್ಟು ಬಾರಿ ನಿಜವೂ ಆಗಿದೆ. ಆಗ ಆಗಿರೋದೂ ಅದೇ... ಡಿಕೆಶಿಗೆ ಇ.ಡಿ ಶಾಕ್ ಕೊಟ್ಟಿದ್ರೆ, ಇತ್ತ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್-ಸಿದ್ದು ಜೋಡಿಯ ಜೋಡಿ ಓಟ ಭರ್ಜರಿ ಸದ್ದು ಮಾಡ್ತಿದೆ.