'ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ, ಬಂದ್ ಮಾಡಿ ಆಗಿದ್ದಾಗ್ಲಿ'

Apr 26, 2022, 4:33 PM IST

ವಿಜಯಪುರ, (ಏ.26): ಕಡು ಬಡವರಿಗೆ ಅನುಕಾಲವಾಗಲೆಂದು ಈ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ  ಒಂದು ರೂ.ಗೆ ಒಂದು ಕೆ.ಜಿ ಆಹಾರಧಾನ್ಯ ನೀಡುವ 'ಅನ್ನ ಭಾಗ್ಯ' ಯೋಜನೆ ಜಾರಿಗೆ ತಂದಿತ್ತು. 2013ರ ಜುಲೈ ತಿಂಗಳಿನಿಂದ ರಾಜ್ಯದಾದ್ಯಂತ ಜಾರಿಗೊಂಡಿತ್ತು. ಈ ಯೋಜನೆಯನ್ನು 2015-16ನೇ ಸಾಲಿನಲ್ಲಿ ಪರಿಷ್ಕರಿಸಿದ್ದು, ಸರ್ಕಾರ ಘಟಕವಾರು ರೀತಿಯಲ್ಲಿ ಕುಟುಂಬದ ಓರ್ವ ಸದಸ್ಯನಿಗೆ ತಲಾ 5 ಕೆಜಿಯಂತೆ ಉಚಿತವಾಗಿ ಅಕ್ಕಿಯನ್ನು ನೀಡುತ್ತಿದೆ. 

ಅ​ನ್ನ​ಭಾಗ್ಯ ಅಕ್ಕಿ ನೀಡಿದ್ದು ಸಿದ್ದು ಅಲ್ಲ, ಕೇಂದ್ರ: ಯಡಿಯೂರಪ್ಪ

ಆದ್ರೆ, ಈ ಯೋಜನೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ ಎಂದಿದ್ದಾರೆ. ಸಿಎಂ ಕಾರ್ಯಕ್ರಮದ ವೇದಿಕೆ ಮೇಲೆಯೇ ಯತ್ನಾಳ್, ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ ಎಂದಿದ್ದು, ಈ ಯೋಜನೆ ಬಂದ್ ಮಾಡಲು ಧೈರ್ಯ ಮಾಡಿ ಆಗಿದ್ದಾಗಲಿ ಎಂದು ಸಿಎಂಗೆ ಹೇಳಿದ್ದಾರೆ.