ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು..? ಇದನ್ನು ಪೆಂಡಿಂಗ್ ಇಟ್ಟಿದ್ದು ಯಾಕೆ..?

Nov 28, 2023, 2:33 PM IST

5  ಪದವೀಧರ ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯನ್ನು  ಕಾಂಗ್ರೆಸ್ ಮಾಡಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳು ಇದ್ದು, ಕಾಂಗ್ರೆಸ್‌ನಿಂದ ಆಯನೂರು ಮಂಜುನಾಥ್(Ayanur Manjunath) ಆಕಾಂಕ್ಷಿ ಆಗಿದ್ದಾರೆ. ಎಸ್‌.ಪಿ. ದಿನೇಶ್‌ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಡಿಕೆಶಿ ಸೂಚನೆ ನೀಡಿದ್ದು, ನಿಮ್ಮಿಬ್ಬರ ಹೆಸರನ್ನು ಎಐಸಿಸಿಗೆ ಕಳುಹಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರಂತೆ. ಇತ್ತೀಚೆಗೆ ಕಾಂಗ್ರೆಸ್‌ಗೆ(Congress) ಬಂದಿರುವ  ಆಯನೂರು ಮಂಜುನಾಥ್, ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ(BJP) ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದರು. ಆಯನೂರು ಮಂಜುನಾಥ್ ಪರವಾಗಿ ಮಧುಬಂಗಾರಪ್ಪ ಬ್ಯಾಟಿಂಗ್ ಮಾಡಿದ್ರೆ, ಇತ್ತ ಎಸ್ ಪಿ ದಿನೇಶ್‌ರಿಂದಲೂ ಟಿಕೆಟ್‌ಗೆ ಲಾಬಿ ನಡೆಸಲಾಗುತ್ತಿದೆ. ಎರಡು ಸಲ ಪರಿಷತ್ ಚುನಾವಣೆಯಲ್ಲಿ ಎಸ್.ಪಿ.ದಿನೇಶ್ ಸೋತಿದ್ದಾರೆ.

ಇದನ್ನೂ ವೀಕ್ಷಿಸಿ:  ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಅಧಿಕಾರಿಗಳಿಗೆ ಇತ್ತಾ ಮಾಹಿತಿ ? ಈ ದಂಧೆ ಮಟ್ಟಹಾಕಲು ಮುಂದಾಗಿಲ್ವಾ ಆರೋಗ್ಯ ಇಲಾಖೆ..?