ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ವಿಶ್

ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಚಿನ್ನದ ಹುಡುಗ ನೀರಜ್ ಚೋಪ್ರಾ ವಿಶ್

Suvarna News   | Asianet News
Published : Sep 01, 2021, 03:03 PM IST

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶತಮಾನಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದರು. ಈ ಮೂಲಕ ಜಾವೆಲಿನ್ ಥ್ರೋ ಪಟು ನೀರಜ್‌ ಕೋಟ್ಯಾಂತರ ಭಾರತೀಯರ ಹೃದಯವನ್ನು ಗೆದ್ದಿದ್ದರು. ಇದೀಗ ಸುದೀಪ್‌ ಬರ್ತ್‌ ಡೇ ಹಾಗೂ ಮುಂಬರುವ ಬಹುನಿರೀಕ್ಷಿತ ಚಿತ್ರ 'ವಿಕ್ರಾಂತ್‌ ರೋಣ' ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.
 

ಬೆಂಗಳೂರು: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಖ್ಯಾತಿಯ ಕಿಚ್ಚ ಸುದೀಪ್‌ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಹಿಂದಿ ಭಾಷೆಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರುವ ಸುದೀಪ್‌ ಗುರುವಾರ(ಸೆ.02) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಶುಭ ಹಾರೈಸಿದ್ದಾರೆ.

ಹೌದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶತಮಾನಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದರು. ಈ ಮೂಲಕ ಜಾವೆಲಿನ್ ಥ್ರೋ ಪಟು ನೀರಜ್‌ ಕೋಟ್ಯಾಂತರ ಭಾರತೀಯರ ಹೃದಯವನ್ನು ಗೆದ್ದಿದ್ದರು. ಇದೀಗ ಸುದೀಪ್‌ ಬರ್ತ್‌ ಡೇ ಹಾಗೂ ಮುಂಬರುವ ಬಹುನಿರೀಕ್ಷಿತ ಚಿತ್ರ 'ವಿಕ್ರಾಂತ್‌ ರೋಣ' ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

ಕೋವಿಡ್‌ ಮೂರನೇ ಅಲೆಯ ಭೀತಿಯಿರುವುದರಿಂದ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳನ್ನು ಭೇಟಿಯಾಗುತ್ತಿಲ್ಲ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಮೂಲಕ ವಿನೂತನವಾಗಿ ಕಿಚ್ಚನ ಬರ್ತ್‌ ಡೇ ಆಚರಿಸಲು ಮುಂದಾಗಿದ್ದಾರೆ. ತಮ್ಮ ನಟನೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳ ಮೂಲಕ ಮಿಂಚುತ್ತಿರುವ ಕಿಚ್ಚ ಸುದೀಪ್‌ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು..
 

02:50ಗಾಯದ ನಡುವೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಮೊದಲ ಪ್ರತಿಕ್ರಿಯೆ!
18:46‘ಲೆಕ್ಕ’ ತಪ್ಪಿದ್ದೆಲ್ಲಿ ಭಾರತದ ಹೆಣ್ಣು ಹುಲಿ? ವಿನೇಶ್ ವಿರುದ್ಧ ನಡೆಯಿತಾ ಸಂಚು? ಏನದು ತೆರೆಯ ಹಿಂದಿನ ಸತ್ಯ?
11:33ಮುವಾಯ್ ಥಾಯ್​ ಫೈಟ್‌ನಲ್ಲಿ ಅರುಣ್ ಸಾಗರ್ ಪುತ್ರನ ಅಸಾಮಾನ್ಯ ಸಾಧನೆ..! ಥಾಯ್ಲೆಂಡ್‌ನಲ್ಲಿ ಧೂಳೆಬ್ಬಿಸ್ತಿರೋ ಭಾರತದ ಯಂಗ್​ ಫೈಟರ್​
07:34ನಾಗರೀಕತೆಯ ಪುನರುತ್ಥಾನ, ರಾಮ ಮಂದಿರ ಲೋಕಾರ್ಪಣೆಗೆ ಕೋಚ್ ಪುಲ್ಲೇಲ ಗೋಪಿಚಂದ್ ಸಂತಸ!
19:40ಚಾಂಪಿಯನ್ ಸಾಕ್ಷಿ ಮಲಿಕ್ ಕುಸ್ತಿಗೇ ಗುಡ್‌ಬೈ, ಕಣ್ಣೀರಿನ ಹಿಂದಿದೆಯಾ ರಾಜಕಾರಣ?
25:44Podcast: ಏಷ್ಯಾಡ್‌ನಲ್ಲಿ ಪದಕ ಬೇಟೆಯ ರೋಚಕ ಕಥೆ, ಏಷ್ಯಾನೆಟ್‌ ಜೊತೆ
25:49Exclusive: ಪತ್ನಿ ಜೀವನದಲ್ಲಿ ಬಂದ ಬಳಿಕವೇ ಅದೃಷ್ಟ ಬದಲಾಗಿದೆ ಎಂದ ಪದಕ ವಿಜೇತ ಪ್ರಣಯ್‌!
10:15ಸೀನಿಯರ್ ಕೋಚ್ ಪತ್ನಿಯಿಂದ ಅಥ್ಲೀಟ್ ಬಿಂದು ರಾಣಿ ಮೇಲೆ ದೌರ್ಜನ್ಯ..! ಈ ಬಗ್ಗೆ ಸೀನಿಯರ್ ಕೋಚ್ ಹೇಳಿದ್ದೇನು?
04:26ತವರಿನಲ್ಲಿ ಕೊನೆಯ ಟೆನಿಸ್ ಪಂದ್ಯವಾಡಿದ ಸಾನಿಯಾ ಮಿರ್ಜಾ, ಭಾವುಕ ಸಂದೇಶ..!
01:566 ಮಂದಿಗೆ ಕಾಮನ್ವೆಲ್ತ್‌ ಪದಕ, ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಅಥ್ಲೀಟ್‌ಗಳಿಗೆ ಭರ್ಜರಿ ಸ್ವಾಗತ!