ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.
ಬೆಂಗಳೂರು: ಕೊರೋನಾ (Coronavirus) ಕಂಟಕ ಕಡಿಮೆಯಾಗುತ್ತಿದ್ದಂತೆಯೇ ಕ್ರೀಡಾ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಐಪಿಎಲ್(IPL), ಟಿ20 ವಿಶ್ವಕಪ್ (T20 WorldCup) ಬಳಿಕ ಕ್ರೀಡಾಲೋಕದಲ್ಲಿ ಮಿಂಚಿನ ಸಂಚಾರ ಮೂಡಿಸಲು ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ (ಐಎನ್‌ಬಿಎಲ್) (Indian National Basketball League) ಆರಂಭವಾಗಲಿದೆ. ಈ ಮೂಲಕ ಕರ್ನಾಟಕ ಬಾಸ್ಕೆಟ್‌ಬಾಲ್ ಹಬ್ ಆಗುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.
ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ (Sri Kanteerava Stadium) ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaj Bommai), ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ (Basketball) ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.
ಇನ್ನು ನಟ ಯಶ್ (Yash) ಮಾತನಾಡಿ, ನಾವು ಆರೋಗ್ಯವಾಗಿರಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಐಎನ್‌ಬಿಎಲ್ ಟೂರ್ನಿಯ ಮೂಲಕ ದೇಶದಲ್ಲಿ ಬಾಸ್ಕೆಟ್‌ಬಾಲ್ ಸಂಸ್ಕೃತಿ ಮತ್ತಷ್ಟು ಬೆಳೆಯಬೇಕು ಎಂದು ಟೂರ್ನಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಾಸ್ಕೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಕೆ. ಗೋವಿಂದರಾಜು, ರಾಜ್ಯಪಾಲ ತಾವರ್‌ಚಂದ್ ಗೆಹಲೋತ್, ಕ್ರೀಡಾಸಚಿವ ನಾರಾಯಣ ಗೌಡ ಉಪಸ್ತಿತರಿದ್ದರು.