Dec 11, 2021, 5:27 PM IST
ಇಲ್ಲೊಬ್ಬ ಪುಟ್ಟ ಬಾಲಕಿ ದೈತ್ಯ ಹೆಬ್ಬಾವಿನ ಜೊತೆ ಆಟವಾಡುತ್ತಾಳೆ. ಆಕೆಗೆ ಆಟಿಕೆಗಳನ್ನು ಕಂಡರೆ ಅಷ್ಟಕ್ಕಷ್ಟೆ. ಹೆಬ್ಬಾವೊಂದು ಪಕ್ಕದಲ್ಲಿದ್ದರೆ ಸಾಕು. ಫುಲ್ ಟೈಂ ಹಾವಿನ ಜೊತೆ ಮಸ್ತಿ ಮಾಡ್ತಾಳೆ ಈಕೆ. ಅದರ ಮೇಲೆಯೇ ಮಲಗಿಕೊಂಡು ಫನ್ ಮಾಡೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು ನೋಡುಗರ ಎದೆ ಝಲ್ಲೆನ್ನುತ್ತೆ.
ಅಬ್ಬಬ್ಬಾ ಇದೆಂಥಾ ಅಸಹ್ಯ : ಮಹಿಳೆ ವಿಡಿಯೋ ವೈರಲ್
ಚಿಕ್ಕ ಹಾವನ್ನು ಕಂಡರೂ ಸಾಕು ಮಾರು ದೂರದಲ್ಲಿ ಸರಿದು ಹೋಗೋ ಜನರ ಮಧ್ಯೆ ಈಕೆಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತೋ.. ಅಂತೂ ಫುಲ್‌ಟೈಂ ಹಾವಿನ ಜೊತೆ ಆಟವಾಡೋದೇ ಇವಳ ಕೆಲಸ. ಜಾಲಿಯಾಗಿ ಹೆಬ್ಬಾವಿನ ಜೊತೆ ಆಡ್ತಾ ದಿನಕಳೆಯುತ್ತಾಳೆ ಈಕೆ.