Dec 13, 2021, 6:06 PM IST
ಮಂಗಳೂರು(ಡಿ.13):ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಕೈರಂಗಳ ಗ್ರಾಮದ ಬಾಳೆಪುಣಿ (Balepuni) ಗ್ರಾಮಪಂಚಾಯತ್ ವಲಯದ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ (Sharada Ganapathi Vidyakendra) ಒಟ್ಟು ಬರೋಬ್ಬರಿ 11 ಜೊತೆ ಅವಳಿ ಜವಳಿ (twins) ಮಕ್ಕಳ ಜೋಡಿ ಇದೆ ಅಂದ್ರೆ ನೀವು ನಂಬಲೇ ಬೇಕು. ಎಲ್‌ಕೆಜಿಯಿಂದ ಹಿಡಿದು ಪಿಯುಸಿ ತನಕ ತರಗತಿಗಳಿರುವ ಈ ಶಾಲೆಯಲ್ಲಿ ಒಟ್ಟು 913 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
Suvarna FIR : ಮಂಗಳೂರು ಕುಟುಂಬದ ಸುಸೈಡ್ ಹಿಂದೆ ಮತಾಂತರ ಭೂತ?
4ನೇ ತರಗತಿಯಲ್ಲಿ 3 ಜೋಡಿ, 5 ನೇ ತರಗತಿಯಲ್ಲಿ 2 ಜೋಡಿ 6,7,8ನೇ ತರಗತಿಯಲ್ಲಿ ತಲಾ ಒಂದು ಜೋಡಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 2 ಜೋಡಿ ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಈ ಅವಳಿ ಮಕ್ಕಳ ಪೈಕಿ 4 ಜೋಡಿ ಹೆಣ್ಣು, 4 ಜೋಡಿ ಗಂಡು ಹಾಗೂ 3 ಗಂಡು-ಹೆಣ್ಣು ಜೋಡಿ ಮಕ್ಕಳಿದ್ದಾರೆ. ಈ ಅವಳಿ - ಜವಳಿ ಮಕ್ಕಳಲ್ಲಿ ಬಿನ್ನ ರೀತಿಯ ವರ್ತನೆ, ಭಾವನೆಗಳಿವೆ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ. ಈ ಶಾಲೆ 2008ರಲ್ಲಿ ಆರಂಭವಾಗಿದೆ. ಶಾಲೆಗೆ ದಾಖಲಾದ ಅವಳಿ ಮಕ್ಕಳಲ್ಲಿ ಒಬ್ಬರಿಂದ ಮಾತ್ರ ಶುಲ್ಕವನ್ನು ಶಾಲಾ ಆಡಳಿತ ಮಂಡಳಿ ಪಡೆಯುತ್ತಿರುವುದು ವಿಶೇಷವಾಗಿದೆ.