ವೇದಿಕೆ ಮೇಲೆ ಕುಸಿದು ಬಿದ್ದ ಹೀರೋ ವಿಶಾಲ್ ವಿಲವಿಲ ಒದ್ದಾಡಿಬಿಟ್ರು! ರಿಯಲೀ ಏನಾಗಿದೆ ಅಪ್ಪು ಆಪ್ತಮಿತ್ರನಿಗೆ?

ವೇದಿಕೆ ಮೇಲೆ ಕುಸಿದು ಬಿದ್ದ ಹೀರೋ ವಿಶಾಲ್ ವಿಲವಿಲ ಒದ್ದಾಡಿಬಿಟ್ರು! ರಿಯಲೀ ಏನಾಗಿದೆ ಅಪ್ಪು ಆಪ್ತಮಿತ್ರನಿಗೆ?

Published : May 14, 2025, 02:42 PM IST

ಈ ಇವೆಂಟ್​ನ ನಂತರ ವಿಶಾಲ್ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ತನಗೇನೂ ಆಗಿಲ್ಲ.. ಸಣ್ಣ ಸಮಸ್ಯೆ ಅಷ್ಟೇ ಅಂತ ವಿಶಾಲ್ ಸ್ಪಷ್ಟನೆ ಕೊಟ್ಟಿದ್ರು. ಆದ್ರೆ ವಿಶಾಲ್​ಗೆ ಏನೋ ಗಂಭೀರವಾದ ಸಮಸ್ಯೆಯಾಗಿದೆ ಅನ್ನೋ ..

ಮಿಸ್ ಕೂವಾಗಮ್ 2025′ ಇವೆಂಟ್​ಗೆ ಬಂದಿದ್ದ ವಿಶಾಲ್, ಮೂರ್ಛೆ ಹೋದ ನಟ ವಿಶಾಲ್ ಆಸ್ಪತ್ರೆಗೆ ದಾಖಲು, ವಿಶಾಲ್ ಆರೋಗ್ಯ ಸ್ಥಿತಿ ಗಂಭೀರ..  ಏನಾಯ್ತು ನಟನಿಗೆ..?

ಕಾಲಿವುಡ್ ನಟ ವಿಶಾಲ್ ಅನಾರೋಗ್ಯದ ಬಗ್ಗೆ ಇತ್ತೀಚಿಗೆ ತುಂಬಾನೇ ವದಂತಿಗಳು ಹರಿದಾಡಿದ್ವು. ಅದ್ರಲ್ಲೂ ಮದಗಜರಾಜ ಇವೆಂಟ್​​ನಲ್ಲಿ ವಿಶಾಲ್​ ಸ್ಥಿತಿ ನೋಡಿದವರು ಬೆಚ್ಚಿಬಿದ್ದಿದ್ರು. ಆದ್ರೆ ನನಗೇನೂ ಆಗಿಲ್ಲ ಸಣ್ಣ ಸಮಸ್ಯೆಯಷ್ಟೇ ಅಂತ ವಿಶಾಲ್ ಸ್ಪಷ್ಟನೆ ಕೊಟ್ಟದ್ರು.  ಈಗ ನೋಡಿದ್ರೆ ಕಾರ್ಯಕ್ರಮವೊಂದರ ವೇದಿಕೆ ಮೇಲೆಯೇ ವಿಶಾಲ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಷ್ಟಕ್ಕೂ ನಟ ವಿಶಾಲ್​ಗೆ ಏನಾಗಿದೆ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. 

ಹೌದು, ಕೆಲ ದಿನಗಳ ಹಿಂದೆ ಮದಗಜರಾಜ ಸಿನಿಮಾದ ಇವೆಂಟ್​ಗೆ ಬಂದಿದ್ದ ವಿಶಾಲ್​ರನ್ನ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ರು. ಯಾಕಂದ್ರೆ ಆಕ್ಷನ್ ಪಾತ್ರಗಳಿಗೆ ಫೇಮಸ್ ಆಗಿದ್ದ ಈ ಆರಡಿಯ ಆಜಾನುಬಾಹು ಹೀರೋ ತೀರಾ ಕೃಶವಾಗಿದ್ರು. ಕೈ ನಡುಗ್ತಾ ಇದ್ದವು. ಕಣ್ಣಲ್ಲಿ ನೀರು ಹರೀತಾ ಇತ್ತು. ಬಾಯಿ ತೊದಲುತ್ತಾ ಇತ್ತು.

ಅರೇ ಹೇಗಿದ್ದ ವಿಶಾಲ್ ಹೇಗಾದ್ರೂ ಅಂತ ಜನ ಶಾಕ್ ಆಗಿದ್ರು. ಈ ಇವೆಂಟ್​ನ ನಂತರ ವಿಶಾಲ್ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ತನಗೇನೂ ಆಗಿಲ್ಲ.. ಸಣ್ಣ ಸಮಸ್ಯೆ ಅಷ್ಟೇ ಅಂತ ವಿಶಾಲ್ ಸ್ಪಷ್ಟನೆ ಕೊಟ್ಟಿದ್ರು. ಆದ್ರೆ ವಿಶಾಲ್​ಗೆ ಏನೋ ಗಂಭೀರವಾದ ಸಮಸ್ಯೆಯಾಗಿದೆ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಅದಕ್ಕೀಗ ಮತ್ತೊಂದು ಪುರಾವೆ ಸಿಕ್ಕಿದೆ.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೂವಾಗಮ್‌ನಲ್ಲಿ ಭಾನುವಾರ ರಾತ್ರಿ ತೃತೀಯಲಿಂಗಿಗಳ ಸೌಂದರ್ಯ ಸ್ಪರ್ಧೆ ನಡೀತಾ ಇತ್ತು. .  ಈ ‘ಮಿಸ್ ಕೂವಾಗಮ್ 2025′ ಸೌಂದರ್ಯ ಸ್ಪರ್ಧೆಗೆ   ವಿಶಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆದ್ರೆ ಇದೇ ವೇದಿಕೆಯಲ್ಲಿ ಕಾರ್ಯಕ್ರಮ ನಡೆವ ವೇಳೆಯೇ ವಿಶಾಲ್ ಮೂರ್ಛೆ ಹೋಗಿದ್ದಾರೆ. ವಿಶಾಲ್​ಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಲಾಗಿದೆ. 

ಅಸಲಿಗೆ ವಿಶಾಲ್ ಆರೋಗ್ಯ ಈ ಪರಿ ಹಾಳಾಗಲಿಕ್ಕೆ ಖುದ್ದು ವಿಶಾಲ್ ಮಾಡಿಕೊಂಡ ಎಡವಟ್ಟುಗಳೇ ಕಾರಣ ಅನ್ನಲಾಗ್ತಾ ಇದೆ. ವಿಶಾಲ್ ನ ಹತ್ತಿರದಿಂದ ಬಲ್ಲವರು ಹೇಳೋ ಪ್ರಕಾರ ವಿಶಾಲ್ ಇವತ್ತಿನ ಸ್ಥಿತಿಗೆ ಕಾರಣ ಅವರ ಬದುಕಲ್ಲಿ ನಡೆದ ಲವ್-ದೋಖಾಗಳು. ಅದಕ್ಕಿಂತ ಹೆಚ್ಚಾಗಿ ಬೆನ್ನುಬಿದ್ದಿರೋ ಆರ್ಥಿಕ ಸಮಸ್ಯೆಗಳು. ಕೆಲ ಸ್ನೇಹಿತರು ಮಾಡಿದ ಮೋಸಗಳು...ಮಾನಸಿಕ ಒತ್ತಡ, ಕುಡಿತ.. ಇವೆಲ್ಲದರ ನಡುವೆ ಸಿಲುಕಿ ವಿಶಾಲ್ ಹೈರಾಣಾಗಿ ಹೋಗಿದ್ದಾನೆ ಅಂತಾರೆ ಆಪ್ತರು.

ಕೆಲ ದಿನಗಳ ಹಿಂದೆ ವಿಶಾಲ್ ಕರ್ನಾಟಕದ ಕರಾವಳಿಯ ದೇಗುಲಗಳಿಗೆ ಭೇಟಿ ಕೊಟ್ಟು  ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ರು. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾ ಲವಲವಿಕೆಯಿಂದ ಓಡಾಡ್ತಾ ಇದ್ರು. ಸೋ ವಿಶಾಲ್ ಸರಿಹೋಗಿದ್ದಾರೆ ಅಂತ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ ವಿಶಾಲ್ ಸ್ಥಿತಿ ನೋಡಿದ್ರೆ ನಿಜಕ್ಕೂ ಸಮಸ್ಯೆ ಗಂಭೀರ ಎನ್ನಲಾಗ್ತಾ ಇದೆ. ವಿಶಾಲ್ ಸ್ಥಿತಿ ನೋಡಿದ ಫ್ಯಾನ್ಸ್ ಹೇಗಿದ್ದ ಹೀರೋ ಹೇಗಾದ ಅಂತ ಬೇಸರ ಪಡ್ತಾ ಇದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:26ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
Read more