Apr 19, 2020, 8:31 PM IST
ಬೆಂಗಳೂರು(ಏ. 19) 13 ಗಾಯಕರು… 3 ವಾದ್ಯಸಂಗೀತಗಾರರು… 2 ಸಂಕಲನಕಾರರು… 50 ಗಂಟೆಗಳು.....ಹೌದು ಇದೊಂದು ಸಂಗೀತದ ರಸದೌತಣ
ತಮ್ಮ ತಮ್ಮ ಮನೆಯ ನಾಲ್ಕು ಗೋಡೆಗಳ ನಡುವೆಯೇ ಇದ್ದು ಇಂಥದ್ದೊಂದು ಸಂಗೀತ ಆಸ್ವಾದಿಸಲು ಸಿಗುತ್ತದೆ ಎಂದು ಯಾರೂ ಭಾವಿಸಿರಲೂ ಅಸಾಧ್ಯ. ಅಕ್ಷರಗಳಲ್ಲಿ ಇದನ್ನು ಕಟ್ಟಿಕೊಡಲಾಗುವುದಿಲ್ಲ ಕೇಳಿಯೇ ಆಸ್ವಾದಿಸಬೇಕು. ಸಮರ್ಪಣಾ ಭಾವದಿಂದ ಅಲಂಕೃತಗೊಳಿಸಿರುವ ಸಂಗೀತಗುಚ್ಛವನ್ನು ನಾವೆಲ್ಲರೂ ಒಮ್ಮೆ ಕೇಳಲೇಬೇಕು.
ಸಂಗೀತ ಸಂಯೋಜಕ ರಾಜು ಅನಂತಸ್ವಾಮಿಯವರ ಅದ್ಭುತ ಸಂಗೀತ ಸಂಯೋಜನೆಲ್ಲಿ ಮೂಡಿಬಂದರುವ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ‘ಮಳೆ ಬರಲಿ ಪ್ರೀತಿಯ ಬನಕೆ’ ಎಂಬ ಸಂಯೋಜನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.. ಕೇಳಿ ಆಸ್ವಾದಿಸಿ ...ಮತ್ತೊಂದು ವಿಚಾರ ಏ.19 ರಾಜು ಅನಂತಸ್ವಾಮಿ ಯವರ ಜನ್ಮದಿನ. ಸಂಗೀತ ಪ್ರೇಮಿಗಳ ಕಡೆಯಿಂದ ಅವರಿಗೆ ಒಂದು ನಮನ..
ಕುಲುಮೆ ಮುಂದೆ ಕುಳಿತು 35 ರೂ . ಸಂಪಾದಿಸಿದ ಕನ್ನಡದ ಸಂಗೀತ ನಿರ್ದೇಶಕ
ರಾಜು ಅನಂತಸ್ವಾಮಿ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಮೈಸೂರು ಅನಂತಸ್ವಾಮಿಯವರ ಮಗ. ರಾಜು ಅನಂತಸ್ವಾಮಿ ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ ಗಾಯಕರಾಗಿದ್ದುದು, ನಟನೆಯನ್ನು ಕೂಡ ಮಾಡಿದ್ದರು.
ಏಪ್ರಿಲ್ 19, 1972. ಮೈಸೂರು ಅನಂತಸ್ವಾಮಿಗಳ ಮಗನಾಗಿ ರಾಜು ಅನಂತಸ್ವಾಮಿ ಜನಿಸಿದರು. 9ನೇ ವಯಸ್ಸಿನಲ್ಲೇ ತಮ್ಮ ತಂದೆಯವರ ಕಛೇರಿಗೆ ತಬಲಾ ನುಡಿಸಿದ ಈ ಹುಡುಗ, ಮುಂದೆ ಹಾರ್ಮೋನಿಯಂ ಹಿಡಿದು ಅನಂತಸ್ವಾಮಿಗಳಂತೆ ತಾನೂ ಹಾಡುತ್ತಾ, ಸಂಗೀತ ಸಂಯೋಜನೆ ಮಾಡುತ್ತಾ ಬೆಳೆದರು.
ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜು ಅವರ ಹೆಸರು ಎಂದಿಗೂ ಚಿರಸ್ಥಾಯಿ. ಈ ಸಂಗೀತ ಮಾಂತ್ರಿಕನ ಶಿಷ್ಯರಾಗಿ ಬೆಳೆದವರು ಅದೆಷ್ಟೋ ಗಾಯಕರು. ಅವರು ಹೊರತಂದ ಧ್ವನಿಮುದ್ರಿಕೆಗಳು ಇಂದಿಗೂ ಸಂಗೀತ ಇಂಪು ಹರಿಸುತ್ತಲೇ ಇವೆ.
ಕನ್ನಡ ಸಂಗೀತ ಲೋಕಕ್ಕೆ ಜನವರಿ 17, 2009 ಕರಾಳ ದಿನ. ರಾಜು ಅನಂತಸ್ವಾಮಿ ಕನ್ನಡ ಸಂಗೀತ ಲೋಕ ಅಗಲಿದ ದಿನ. ಏನೇ ಆಗಲಿ..ಏನೇ ಹೋಗಲಿ... ರಾಜು ಅನಂತಸ್ವಾಮಿಯವರ ಸಂಯೋಜನೆ ಎಂದಿಗೂ ಶಾಶ್ವತ. ರಿಯಾಲಿಟಿ ಶೋಗಳಲ್ಲಿ ಸುಗಮ ಸಂಗೀತ ಲೋಕದಲ್ಲಿ ಅವರ ಸಂಯೋಜನೆ ಹಾಡಿಗೆ ಪ್ರತ್ಯೇಕ ಸ್ಥಾನವೇ ಇದೆ.