ಕೋಲಾರದಲ್ಲಿ ಜನರನ್ನು ನಿಯಂತ್ರಿಸಲು ಫೀಲ್ಡಿಗಿಳಿದ ಮಾಜಿ ಸೈನಿಕರು..!

Apr 12, 2020, 4:22 PM IST

ಕೋಲಾರ(ಏ.12): ಕೋಲಾರದ APMC ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಬರುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಮರೆತಿದ್ದಾರೆ. ಹೀಗಾಗಿ ಜನರನ್ನು ನಿಯಂತ್ರಿಸಲು ಮಾಜಿ ಸೈನಿಕರು ಫೀಲ್ಡಿಗಿಳಿದಿದ್ದಾರೆ.

ಕೊರೋನಾ ಆತಂಕದ ನಡುವೆ ಕರ್ನಾಟಕ ಕೊಂಚ ನಿರಾಳ..!

ಹೌದು, ಕೋಲಾರ APMC ಮಾರ್ಕೆಟ್‌ನಲ್ಲಿ ಮಾಸ್ಕ್ ಇದ್ರೆ ಮಾತ್ರ ಎಂಟ್ರಿ ಎನ್ನುವ ನಿಯಮ ವಿಧಿಸಲಾಗಿದೆ. ಜನರು ಮಾಸ್ಕ್ ಹಾಕಿಕೊಂಡೇ ಮಾರುಕಟ್ಟೆಗೆ ಬಂದಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದಾರೆ.

ಸಾರ್ವಜನಿಕವಾಗಿ ಮಗಳ ಜೊತೆ ಐಶೂ ಅತ್ತಿದ್ದೇಕೆ..? ಇಲ್ಲಿವೆ ಫೋಟೋಸ್

ಈಗಾಗಲೇ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಕೊರೋನಾ ವೈರಸ್‌ನಿಂದ ಬಚಾವಾಗಲು ಮನೆಯಲ್ಲೇ ಇರುವುದು, ಅನಿವಾರ್ಯ ಸಂದರ್ಭದಲ್ಲಿ ಹೊರಗೆ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ ಜವಾಬ್ದಾರಿಗಳೆನಿಸಿವೆ.