Big 3: ಮಾಲೂರು ತಾಲ್ಲೂಕಿನಲ್ಲಿ ಧೂಳುಮಯ ರಸ್ತೆಗಳು: ಕೇಳೋರಿಲ್ಲ ಜನರ ಗೋಳು

Dec 26, 2022, 4:05 PM IST

ಬೆಂಗಳೂರು-ವಿಕೋಟೆ ರಾಜ್ಯ ಹೆದ್ದಾರಿ 95ರ ಮಧ್ಯದಲ್ಲಿ ಸಿಗುವ ಮಾಲೂರು ತಾಲೂಕಿನ ನಾಲ್ಕು ದಿಕ್ಕಿನಲ್ಲಿರುವ ರಸ್ತೆಯಲ್ಲಿ ನಿವೇನಾದ್ರು ಒಮ್ಮೆ ಸಂಚಾರ ಮಾಡಿದ್ರೆ ಸಾಕು, ಜೀವನದಲ್ಲಿ ನಿಮಗೆ ಇದರ ಸಹವಾಸ ಸಾಕಪ್ಪಾ ಸಾಕು ಅಂತ ಅನಿಸದೆ ಇರೋದಿಲ್ಲ. ಅಪ್ಪಿ ತಪ್ಪಿ ಹೊಸಬರು ಏನಾದ್ರು ಈ ರಸ್ತೆಯಲ್ಲಿ ಸಂಚರಿಸಿದ್ರೆ ಆ ದೇವರೇ ಕಾಪಾಡಬೇಕು. ಇದಕ್ಕೆ ಸಾಕ್ಷಿಯಾಗಿ ಕಳೆದ ಎರಡು ವರ್ಷಗಳಿಂದ ಇಲ್ಲಿನ ಮಾರುದ್ದ ಗುಂಡಿಗಳನ್ನು ತಪ್ಪಿಸೋದಕ್ಕೆ ಹೋಗಿ ನೂರಕ್ಕೂ ಹೆಚ್ಚು ಜನರು ಕೈ ಕಾಲು ಮುರಿದುಕೊಂಡಿದ್ದಾರೆ. ಅದೆಷ್ಟೋ ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನಾಮಕವಸ್ಥೆಗೆ ಹಾಕಿರುವ ಬೀದಿ ದೀಪಗಳು ಸಹ ಉರಿಯುತ್ತಿಲ್ಲ. ಈಗಾಗಿ ಕತ್ತಲಾಗುತ್ತಿದಂತೆ ಈ ರಸ್ತೆಗಳಲ್ಲಿ ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡೋದಕ್ಕೂ ಕಷ್ಟಕರವಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾಗಿ ಟೆಂಡರ್ ಸಹ ಆಗಿದೆ. ಆದಷ್ಟು ಬೇಗ ಉತ್ತಮ ರಸ್ತೆ ಮಾಡ್ತೇವೆ ಅಂತ ಕಳೆದ ಎರಡು ವರ್ಷಗಳಿಂದ ಶಾಸಕ ಕೆ.ವೈ ನಂಜೇಗೌಡ ಕಾಲಹರಣ ಮಾಡ್ತಿದ್ದಾರೆ. ಜಲ್ಲಿ ಹೊಡಿಸೋದು ಮತ್ತೆ ಕೆಲ ತಿಂಗಳು ಕೆಲಸ ನಿಲ್ಲಿಸೋದು ಮಾಡ್ತಿರೋದು ಬಿಟ್ರೆ ಒಂದೇ ಸಮನೆ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಇಷ್ಟೆಲ್ಲಾ ಆಗ್ತಿದ್ರು ಸಹ ಶಾಸಕರ ಬೆಂಬಲಿಗರು ಈ ವಿಚಾರವನ್ನು ಸಮರ್ಥನೆ ಮಾಡಿಕೊಳ್ತಿರೋದು ಬಿಟ್ರೆ, ಶಾಸಕರಿಗೆ ಮನವರಿಕೆ ಮಾಡಿಸಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಈಶ್ವರ ಖಂಡ್ರೆ ರಾಜಕೀಯ ಸನ್ಯಾಸ ಪಡೆಯಲಿ: ಡಿಕೆಸಿ ಆಗ್ರಹ