ಬೆಂಗಳೂರಿನ ಹೈಟೆಕ್ ಹೆರಿಗೆ ಆಸ್ಪತ್ರೆಗೆ ಬೀಗ: ಯಶವಂತಪುರದ ದೊಡ್ಡ ದವಖಾನೆಯೇ ಮೂಲೆಗುಂಪು

Nov 3, 2023, 10:18 AM IST

ಸಿಲಿಕಾನ್ ಸಿಟಿ ಜನರಿಗೆ ಉತ್ತಮ ಆರೋಗ್ಯ ಸಿಗಬೇಕು ಅಂದ್ರನೇ ಕಷ್ಟ. ಜನರಂತೂ ಸರ್ಕಾರಿ ಆಸ್ಪತ್ರೆಯೆಂದರೆ(Hospital) ಮೂಗು ಮೂರಿಯೋದೇ ಹೆಚ್ಚು. ಆದ್ರೆ ಇರೋ ಒಳ್ಳೆಯ ಆಸ್ಪತ್ರೆಗಳಿಗೆ ಬಿಬಿಎಂಪಿ(BBMP) ಬೀಗ ಹಾಕ್ತಿದೆ. ಲಕ್ಷಾಂತರ ಮಂದಿ ಓಡಾಟ ನಡೆಸುವ ಯಶವಂತಪುರದಲ್ಲಿ ದೊಡ್ಡ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಯಶವಂತಪುರ ರೈಲ್ವೆ ಸ್ಟೇಷನ್‌ ಬಳಿ ಹೆರಿಗೆ ಆಸ್ಪತ್ರೆ ಇತ್ತು. ಕೊರೊನಾ(Corona) ಸಮಯದಲ್ಲಿ ಸಚಿವರಾಗಿದ್ದ ಮುನಿರತ್ನ(Muniratna) ಇದನ್ನ ಕೋವಿಡ್‌ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿದ್ರು. ಆದ್ರೆ ಕೊರೊನಾ ಹೋಗಿ ಇಷ್ಟು ದಿನ ಆದ್ರೂ ಈ ಆಸ್ಪತ್ರೆ  ಬಿಬಿಎಂಪಿ ಅಧಿಕಾರಗಳ ಗಮನಕ್ಕೆ ಬಂದಿಲ್ಲ. ಇಂತಹ ದೊಡ್ಡ ಆಸ್ಪತ್ರೆಗೆ ಅಧಿಕಾರಿಗಳು ಬೀಗ ಹಾಕಿದ್ದು ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆ ನಿರ್ವಹಣೆ ಮಾಡಲು 5 ಸಿಬ್ಬಂದಿ ಜೊತೆ ಸೆಕ್ಯೂರಿಟಿಗಳನ್ನು ನೇಮಿಸಲಾಗಿದೆ. ಆದ್ರೆ ಅವರಿಗೆ ಬಿಬಿಎಂಪಿ 5 ತಿಂಗಳಿಂದ ಸಂಬಳ ಕೊಟ್ಟಿಲ್ವಂತೆ.. ಇನ್ನು ಸುತ್ತಮುತ್ತಲಿನ ಹಲವರು ಕೋವಿಡ್ ಸೆಂಟರ್ ಆಗಿರುವ ಇದನ್ನ ಬದಲಾವಣೆ ಮಾಡಿ.. ರೋಗಿಗಳಿಗೆ ಉಪಯೋಗ ಆಗುವಂತೆ ಮಾಡಿ ಎಂದು ಮನವಿ ಮಾಡ್ತಿದ್ದಾರೆ.ಗ್ರಾಮಗಳಲ್ಲಿ ಆಸ್ಪತ್ರೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಟ ನಡೆಸೋದು ಮಾಮೂಲಿ.. ಆದ್ರೆ ಬೆಂಗಳೂರಿನಂತಹ ಸಿಟಿಯಲ್ಲೇ ಜನ ಚಿಕಿತ್ಸೆ ಸಿಗದೇ ಒದ್ದಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಯಡವಟ್ಟಿಗೆ ದೊಡ್ಡ ಆಸ್ಪತ್ರೆಗೆ ಬೀಗ ಬಿದ್ದಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಬೇಕಿದೆ.

ಇದನ್ನೂ ವೀಕ್ಷಿಸಿ:  ಅಪ್ಪು ಹೆಸರಲ್ಲಿ ಯಶ್-ಪ್ರಕಾಶ್ ರಾಜ್ ದೊಡ್ಡ ಸಾಧನೆ: ಕೊಟ್ಟ ಮಾತು ಉಳಿಸಿಕೊಂಡ ಸ್ಟಾರ್ಸ್..!