ಕೋಲಾರ: ವೇಣುಗೋಪಾಲ ಸ್ವಾಮಿ ದೇವಾಲಯದ ಗೋಪುರದಲ್ಲಿದೆ ಪಾರಿವಾಳ ಲೋಕ..!

ಕೋಲಾರ: ವೇಣುಗೋಪಾಲ ಸ್ವಾಮಿ ದೇವಾಲಯದ ಗೋಪುರದಲ್ಲಿದೆ ಪಾರಿವಾಳ ಲೋಕ..!

Published : May 27, 2022, 12:12 PM IST

*  ಪಕ್ಷಿಗಳ ಉಳಿವಿಗಾಗಿ ಪಣತೊಟ್ಟ ಗ್ರಾಮಸ್ಥರು 
*  ವೇಣುಗೋಪಾಲ ಸ್ವಾಮಿಗೆ ಪಾರಿವಾಳಗಳ ಇಂಚರ ಅದರ ಕೂಗುಗಳೇ ಬೆಳಗಿನ ಸುಪ್ರಭಾತ
*  ಪ್ರತ್ಯೇಕ ಗೂಡುಗಳನ್ನ ನಿರ್ಮಾಣ ಮಾಡಿ ಪಕ್ಷಿ ಪ್ರೇಮ ಮೆರೆಯುತ್ತಿರುವ ಜನರು 
 

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್‌, ಕೋಲಾರ 

ಕೋಲಾರ(ಮೇ.27): ಒಂದು ಕಾಲದಲ್ಲಿ ಆ ಪಕ್ಷಿ ಇಲ್ಲದೆ ಹೋಗಿದ್ರೆ ರಾಜ ಮಹಾರಾಜರು ಸಹ ಕಷ್ಟ ಪಡಬೇಕಾಗಿತ್ತು. ಏನೇ ಸಂದೇಶ ನೀಡಬೇಕಾಗಿದ್ರು, ಉತ್ತರ ಕೊಡಬೇಕಾದ್ರೂ ಅದರ ಅವಶ್ಯಕತೆ ಬಹಳ ಇತ್ತು. ಕಾಲ ಬದಲಾದಂತೆ ಆಧುನಿಕ ತಂತ್ರಜ್ಞಾನದ ಬಳಿಕೆಯಿಂದ ದಿನದಿಂದ ದಿನಕ್ಕೆ ಅಳಿವಿನ ಅಂಚಿಗೆ ಬಂದು ತಲುಪಿದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಆ ಪಕ್ಷಿಗಳ ಉಳಿವಿಗಾಗಿ ಗ್ರಾಮಸ್ಥರು ಪಣತೊಟ್ಟು ಪೋಷಣೆ ಮಾಡ್ತಿದ್ದು ,ಎಲ್ಲರೂ ಮಾದರಿಯಾಗಿದ್ದಾರೆ.

ಒಂದೆಡೆ ಸುಂದರವಾದ, ಪುರಾತನ ಕಾಲದ ದೇವಸ್ಥಾನ. ದೇವಸ್ಥಾನದ ಗೋಪುರದ ಬಳಿ ಪುಟಾಣಿ ಗೂಡು ಕಟ್ಕೊಂಡು ವಾಸಿಸುತ್ತಿರುವ ಪಾರಿವಾಳಗಳ ಹಿಂಡು. ಆ ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕಿ ಪೋಷಿಸುತ್ತಿರುವ ಗ್ರಾಮಸ್ಥರು. ಅಂದಹಾಗೆ ಈ ರೀತಿ ಸುಂದರವಾದ ದೃಶ್ಯಗಳು ಕಂಡು ಬರೋದು ಕೋಲಾರ ತಾಲ್ಲೂಕಿನ ಕಿತ್ತಂಡೂರು ಗ್ರಾಮದಲ್ಲಿ. ಊರಿನ ಮಧ್ಯದಲ್ಲಿ ಪುರಾತನ ಕಾಲದ ವೇಣುಗೋಪಾಲ ಸ್ವಾಮಿಯ ದೇವಾಲಯದ ಗೋಪುರದ ಮೇಲೆ ಪಾರಿವಾಳಗಳ ಲೋಕವೆ ಸೃಷ್ಟಿಯಾಗಿದ್ದು ಇದಕ್ಕೆ ನೂರಾರು ವರ್ಷಗಳ ಇತಿಹಾಸ ಸಹ ಇದೆ. ಹೌದು ಆಧುನಿಕ ಪ್ರಪಂಚದಲ್ಲಿ  ತಂತ್ರಜ್ಜಾನದ ಬಳಕೆಯಿಂದ ಪ್ರತಿನಿತ್ಯ ನಮ್ಮಲ್ಲೇ ಒಂದಾಗಿ ವಾಸಿಸುತ್ತಿದ್ದ ಅದೆಷ್ಟೋ ಪಕ್ಷಿಗಳು ಅಳಿವಿನ ಅಂಚಿಗೆ ಬಂದು ತಲುಪಿದೆ. ಅದರಲ್ಲಿ ಈ ಪಾರಿವಾಳಗಳು ಸಹ ಒಂದೂ ಭಾಗ. ಕಳೆದ ಕೆಲ ವಷ೯ಗಳಿಂದ ಕೆಲ ಕಡೆಗಳಲ್ಲಿ ಮಾತ್ರ ಪಾರಿವಾಳಗಳ ಹಿಂಡು ಕಾಣಸಿಗ್ತಿದ್ದು, ಒಂದು ಕಾಲದಲ್ಲಿ ಇದೇ ಪಾರಿವಾಳಗಳನ್ನು ರಾಜ ಮಹಾರಾಜರು ಮಾಹಿತಿ ಕಳುಹಿಸೋದಕ್ಕೆ, ವಿನಿಮಯ ಮಾಡೋದಕ್ಕೆ ಬಳಕೆ ಮಾಡಿಕೊಳ್ತಿದ್ರು. ಕಾಲ ಕಳೆದಂತೆ ಆಧುನಿಕ ತಂತ್ರಜ್ಜಾನ ಬಳಿಕ ಇದರ ಬಳಕೆ ಸಂಪೂರ್ಣವಾಗಿದ್ದು, ಟವರ್ ಗಳಿಂದ ಬರುವ ತರಂಗಗಳಿಂದ ಪಾರಿವಾಳಗಳು ಅಳಿವಿನ ಅಂಚಿಗೆ ಬಂದು ತಲುಪಿದೆ. ಆದ್ರೆ ಕಿತ್ತಂಡೂರು ಗ್ರಾಮದ ಈ ದೇವಸ್ಥಾನದಲ್ಲಿ ಇಂದಿಗೂ ನಮಗೆ ಸಾವಿರಾರು ಪಾರಿವಾಳಗಳು ಒಂದೇ ಕಡೆಯಲ್ಲಿ ಕಾಣಸಿಗ್ತಿದ್ದು,ಇದಕ್ಕೆ ಪ್ರಮುಖ ಕಾರಣಕರ್ತರು ಗ್ರಾಮಸ್ಥರು. ಹೌದು ಈ ಗೋಪುರವೇ ಇವುಗಳ ಪಾಲಿನ ಅರಮನೆ ಆಗಿದ್ದು, ಪಾರಿವಾಳಗಳ ಮೇಲೂ ಗ್ರಾಮಸ್ಥರಿಗೆ ಅಪಾರ ಪ್ರೀತಿ ಇರೋದ್ರಿಂದ, ಪ್ರತಿ ನಿತ್ಯ ಧಾನ್ಯ ಕಾಳುಗಳನ್ನು ಹಾಕಿ ಪೋಷಣೆ ಮಾಡುತ್ತಿದ್ದು, ಇವುಗಳ ಚಟುವಟಿಕೆಗಳು ಸಹ ಗ್ರಾಮದ ಜನರ ಮನಸ್ಸಿಗೆ ನೆಮ್ಮದಿ ನೀಡುತ್ತಿದೆ.ಯಾವುದೇ ದುಷ್ಟ ಶಕ್ತಿಗಳು ಪಕ್ಷಿಗಳನ್ನ ತಾಕದಂತೆಯೂ ಗ್ರಾಮಸ್ಥರು ರಕ್ಷಣೆ ಮಾಡ್ತಿದ್ದಾರೆ. 

BIG 3: ಈ ಸೇತುವೆಯಲ್ಲಿ ನಡೆದಾಡಲಿಕ್ಕೆ ಗುಂಡಿಗೆ ಬೇಕು: ಅಡಿಕೆ ಮರವೇ ಸೇತುವೆ..!

ಇನ್ನೂ ವೇಣುಗೋಪಾಲ ಸ್ವಾಮಿಗೆ ಪಾರಿವಾಳಗಳ ಇಂಚರ ಅದರ ಕೂಗುಗಳೇ ಬೆಳಗಿನ ಸುಪ್ರಭಾತವಾಗಿದೆ. ಇವುಗಳ ಹಾವ ಭಾವ, ಭಂಗಿಗಳನ್ನ ನೋಡುವುದೆ ಕಣ್ಣಿಗೆ ಪರಮಾನಂದವಾಗಿದ್ದು, ಹೋಗಿ ಬರುವ ಜನರು ಇದನ್ನು ನೋಡಿಕೊಂಡು ಕೆಲಕಾಲ ಕಣ್ತುಂಬಿಕೊಳ್ತಿದ್ದಾರೆ. ಇನ್ನು ಪ್ರತಿ ದಿನ 200-300 ಗ್ರಾಂನಷ್ಟು ಧಾನ್ಯಗಳು ಇವುಗಳಿಗೆ ಬೇಕಾಗಿದ್ದು, ಗ್ರಾಮದ ಜನ್ರು ಅಕ್ಕಿ, ಗೋಧಿ, ವಿವಿಧ ರೀತಿಯ ಕಾಳುಗಳನ್ನ ಹಾಕುತ್ತಾರೆ. ಬೆಳಗ್ಗೆ 7 ಗಂಟೆಯಾಗುತ್ತಿದ್ದಂತೆ ಹಾರಿ ಬರುವ ಪಾರಿವಾಳಗಳು ಅದೆಷ್ಟೇ ಜನರು ಇದ್ರು ಸಃ ಭಯಪಡದೇ ಅಷ್ಟೇ ಸಲುಗೆಯಿಂದ ಕುಳಿತುಕೊಂಡು ಆಹಾರ ಸೇವಿಸೋದು ಇಲ್ಲಿನ ಮತ್ತೊಂದು ವಿಶೇಷ. ಇನ್ನೂ ಲಕ್ವ ಪಾರವಾಳಗಳ ತಳಿಗೆ ಎಲ್ಲಿಲ್ಲದ ಬೇಡಿಕೆ ಸಹ ಇರೋಂದ್ರಿಂದ ಔಷಧಕ್ಕೆ ಬಳಸುವುದರಿಂದ ಇವುಗಳನ್ನ ಪತ್ತೆ ಹಚ್ಚುವುದು ಕಷ್ಟ. ಕಪ್ಪು, ಬಿಳಿ, ಕಪ್ಪು ಬಿಳಿ ಮಿಶ್ರಿತ ಪಾರಿವಾಳಗಳೆ ಇಲ್ಲಿ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ರಾಜ ಮಹರಾಜರು ಇವುಗಳನ್ನ ಸಂದೇಶ ರವಾನೆ ಮಾಡಲು ಬಳಸುತ್ತಿದ್ರು, ಜೊತೆಗೆ ಇವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನ ನಿರ್ಮಾಣ ಮಾಡಿ ಪಕ್ಷಿ ಪ್ರೇಮ ಮೆರೆಯುತ್ತಿದ್ರು. ಆದ್ರೇ ಯಾವುದೇ ಅಪೇಕ್ಷೆ ಇಲ್ಲದೆ ಈ ಗ್ರಾಮಸ್ಥರು ಅದಕ್ಕಿಂತ ಹೆಚ್ಚಿನ ಪ್ರೇಮ ಮೆರೆಯುತ್ತಿರೊದ್ರಿಂದ ಇಂದಿಗೂ ಸಾವಿರಾರು ಪಾರಿವಾಳಗಳು ಇಲ್ಲಿ ಜೀವಿಸುತ್ತಿರೋದು ವಿಶೇಷ.

ಒಟ್ನಲ್ಲಿ ಆಧುನಿಕ ಯುಗದಲ್ಲಿ ಪಾರಿವಾಳಗಳು ಅವನತಿಗೆ ತಲುಪುತ್ತಿದೆ. ರಾಜ ಮಹಾರಾಜರು ಇವುಗಳಿಗಾಗಿ ಮಹಲ್ ಗಳನ್ನ ನಿರ್ಮಿಸಿರುವ ಇತಿಹಾಸಗಳು ನಮ್ಮ ಕಣ್ಣ ಮುಂದಿದ್ದು. ಇಂತಹ ಕಾಲಮಾನದಲ್ಲಿ ಈ ಗ್ರಾಮದ ಜನ್ರು ಪ್ರೀತಿಯಿಂದ ಪಾರಿವಾಳಗಳ ಪೋಷಣೆ ಮಾಡುತ್ತಿರುವುದು ಪಕ್ಷಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಿದ್ದಂತೆ.
 

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more