ಪ್ರೀತಿಸಿ ನಿಖಾ ಆದವರಿಗೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ: ರಕ್ಷಣೆಗಾಗಿ ಎಸ್ಪಿ ಕಚೇರಿ  ಮೆಟ್ಟಿಲು ಹತ್ತಿದ ಲವ್‌ ಬರ್ಡ್ಸ್!

ಪ್ರೀತಿಸಿ ನಿಖಾ ಆದವರಿಗೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ: ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ ಲವ್‌ ಬರ್ಡ್ಸ್!

Published : Nov 18, 2023, 12:45 PM IST

ಅವನು ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕ್ಯಾನಿಕ್‌ ಆಗಿದ್ದವನು, ಅವಳು ಬಿಫಾರ್ಮಸಿ ಮುಗಿಸಿ ಇನ್ನೇನು ಒಳ್ಳೆಯ ಜಾಬ್‌ಗೆ ಸೇರ್ಬೇಕಿತ್ತು. ಎದುರು ಬದರು ಮನೆಯಲ್ಲಿದ್ದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇವರ ಪ್ರೀತಿಗೆ ಮನೆಯವರು ಒಪ್ಪದೆ ಇದ್ದಾಗ ಓಡಿ ಹೋಗಿ ನಿಖಾ ಆಗಿದ್ದರು. ಆದ್ರೀಗ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದ್ದು, ರಕ್ಷಣೆಗಾಗಿ ವಿಜಯಪುರ ಎಸ್ಪಿ ಮೊರೆ ಹೋಗಿದ್ದಾರೆ.
 

ಕೈ ಕೈ ಹಿಡಿದು ನಿಂತಿರೋ ಇವ್ರ ಹೆಸರು ಇಸಾಕ್‌ ಜನ್ನಳ್ಳಿ ಹಾಗೂ ಸುಮಯ್ಯ ಡೋಣಿ ಅಂತಾ. ವಿಜಯಪುರ(Vijayapura) ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಂಬಾವಿ ಕಾಲೋನಿ ನಿವಾಸಿಗಳು. ಪ್ರೀತಿಸಿ(Love) ಮದುವೆಯಾಗಿರೋ ಇವರಿಗೆ  ಸುಮಯ್ಯ ಡೋಣಿ ಕುಟುಂಬದಿಂದ ಜೀವ ಭಯವಿದೆಯಂತೆ. ಹೀಗಾಗಿ ನಮಗೆ ರಕ್ಷಣೆ ಬೇಕು ಅಂತಾ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಕೂತಿದ್ದಾರೆ. 5 ವರ್ಷದಿಂದ ಪ್ರೀತಿ ಮಾಡ್ತಿದ್ದ ಇವರು ಕೆಲ ದಿನಗಳ ಹಿಂದೆ ಮುಸ್ಲಿಂ ಧರ್ಮದ ನಿಯಮಗಳಂತೆ ವಿಜಯಪುರದ ದರ್ಗಾವೊಂದರಲ್ಲಿ ನಿಖಾ ಮಾಡಿಕೊಂಡಿದ್ದಾರೆ. ಆದ್ರೆ, ಇಬ್ಬರನ್ನು ಮುಗಿಸಿ ಬಿಡುವುದಾಗಿ ಸುಮಯ್ಯ ಡೋಣಿ ತಂದೆ ಸೇರಿದಂತೆ ಕುಟುಂಬದವರು ಧಮ್ಕಿ ಹಾಕ್ತಿದ್ದಾರೆ. ಹಾಗಾಗಿ ರಕ್ಷಣೆ ಕೋರಿ ಎಸ್ಪಿ ಕಚೇರಿಗೆ ಬಂದಿದ್ದಾರೆ. ಇಸಾಕ್‌ ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿ ಮೆಕಾನಿಕ್ ಕೆಲ್ಸಾ ಮಾಡ್ತಿದ್ದಾನೆ. ಸುಮಯ್ಯ ಬಿ ಫಾರ್ಮಸಿ ಮುಗಿಸಿದ್ದು ಜಾಬ್‌ ಸಿಗೋ ನಿರೀಕ್ಷೆಯಲ್ಲಿದ್ದಾಳೆ. ಆದ್ರೆ ತಾಳಿಕೋಟೆಯಲ್ಲಿರುವ ಸುಮಯ್ಯಾಳ ಡೋಣಿ ಕುಟುಂಬಸ್ಥರು ಪ್ರಭಾವಿಗಳಾಗಿದ್ದಾರೆ. ಸುಮಯ್ಯ ಕಿಡ್ನಾಪ್‌ ಆಗಿದೆ ಎಂದು ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರಿಂದ ಇಸಾಕ್‌ ಅಜ್ಜ-ಅಜ್ಜಿಗೆ ಟಾರ್ಚರ್ ಕೊಡಿಸ್ತಿದ್ದಾರಂತೆ. ಪ್ರೀತಿಸಿ ಮದುವೆಯಾಗಿರೋ ಇಬ್ಬರಿಗೂ ಹುಡುಗಿ ಕುಟುಂಬಸ್ಥರಿಂದ ಜೀವಭಯ ಕಾಡ್ತಿದೆ. ಡೋಣಿ ಕುಟುಂಬದವರು ಪ್ರಭಾವಿಗಳು ಆಗಿರೋದ್ರಿಂದ ಏನಾದ್ರೂ ಮಾಡ್ತಾರೆ ಈ ಪ್ರಯಣಯ ಪಕ್ಷಿಗಳಿಗೆ ಎನ್ನುವ ಭಯ ಹುಡುಗನ ಕುಟುಂಬಸ್ಥರಲ್ಲಿದೆ.  

ಇದನ್ನೂ ವೀಕ್ಷಿಸಿ:  ಸಿಎಂ ಪುತ್ರನ ವಿಡಿಯೋ ವೈರಲ್: ಯತೀಂದ್ರ ಮಾತಾಡಿದ್ದು ಪೊಲೀಸ್ ಇಲಾಖೆ ವರ್ಗಾವಣೆ ಬಗ್ಗೆನಾ..?

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more