Feb 26, 2024, 12:41 PM IST
ಬೆಂಗಳೂರಿನ ಜನರಿಗೆ BWSSB ಕಾವೇರಿ ಜಲಾಘಾತ ನೀಡುತ್ತಿದೆ. ನಾಳೆ ಬೆಂಗಳೂರಿಗೆ(Bengaluru) ನೀರಿನ ಪೂರೈಕೆ ಸಂಪೂರ್ಣ ಬಂದ್ ಆಗಲಿದೆ ಎಂದು ಮಾಹಿತಿ ತಿಳಿದುಬಂದಿದೆ. BWSSB ತುರ್ತು ನಿರ್ವಹಣಾ ಕಾರ್ಯ ನಡೆಸುತ್ತಿರುವ ಹಿನ್ನಲೆ ನಾಳೆ, ನಾಡಿದ್ದು ಬೆಂಗಳೂರಿಗೆ ನೀರು(Water) ಪೂರೈಕೆ ಸಂಪೂರ್ಣ ಬಂದ್ ಆಗಲಿದೆಯಂತೆ. ನಾಳೆ ಬೆಳಿಗ್ಗೆ 6 ರಿಂದ ನಾಡಿದ್ದು ಬೆಳಿಗ್ಗೆ 6 ರವರೆಗೆ ನೀರು ಬರಲ್ಲ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಸುಮಾರು 35 ಬಡಾವಣೆಗಳಲ್ಲಿ ನೀರು ಇರುವುದಿಲ್ಲ. ಹಾಗಾಗಿ ನಿರ್ಲಕ್ಷ್ಯ ಬಿಟ್ಟು, ಇಂದೇ ಎಚ್ಚೆತ್ತು ನೀರು ತುಂಬಿಸಿಕೊಳ್ಳಿ. ಎರಡು ದಿನಕ್ಕಾಗುವಷ್ಟು ಹೆಚ್ಚು ನೀರು ಸಂಗ್ರಹ ಮಾಡಿಕೊಳ್ಳುವುದು ಉತ್ತಮವಾಗಿದೆ. BWSSB ನೀರಿನ ಬಲ್ಕ್ ಫ್ಲೋ ಮೀಟರ್‌ಗಳನ್ನು(Water bulk flow meter) ಅಳವಡಿಕೆ ಮಾಡುತ್ತಿರುವ ನಂದಿನಿ ಲೇಔಟ್, ಬಿಎಚ್‌ಇಎಲ್ ಲೇಔಟ್, ಮಲ್ಲತ್ತಹಳ್ಳಿ ಎನ್‌ಜಿಇಎಫ್ ಲೇಔಟ್, ಮೈಸೂರು ರಸ್ತೆ, ಶಿರ್ಕೆ, ಶಿವಣ್ಣ ಲೇಔಟ್ ಪ್ರಶಾಂತನಗರ, ತಿಮ್ಮೇನಹಳ್ಳಿ, ಗೋವಿಂದರಾಜನಗರ, ಕೆಎಚ್‌ಬಿ ಕಾಲೋನಿ, ದಾಸರಹಳ್ಳಿ, ಜಿಕೆಡಬ್ಲ್ಯು ಲೇಔಟ್ ,ಬಸವೇಶ್ವರ ಲೇಔಟ್, ಲಾನಜರಸಯ್ಯ ಲೇಔಟ್ , ಸಿಂಗಾಪುರ , ಎಂಎಸ್ ಪಾಳ್ಯ, ರಾಮಚಂದ್ರಾಪುರ, ಡಿಫೆನ್ಸ್ ಲೇಔಟ್ , ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಚಾಮುಂಡಿನಗರ , ಭುವನೇಶ್ವರಿ ನಗರ, ಈಜಿಪುರ, ಮುನೇಶ್ವರ ದೇವಸ್ಥಾನ ರಸ್ತೆ , ಅಕ್ಕಮ್ಮ ರಸ್ತೆ, ಮುನಿಯಪ್ಪ ರಸ್ತೆ, ಸಂಜಯನಗರ, ರಾಮಾಂಜನೇಯ ಲೇಔಟ್ , ಶಾನಭಾಗ್ ಲೇಔಟ್, ವೀರಪ್ಪ ರೆಡ್ಡಿ ಲೇಔಟ್, ರೇನ್‌ಬೋ ಲೇಔಟ್ , ರೇನ್‌ಬೋ ಲೇಔಟ್ , ಮಂಜುನಾಥ ಲೇಔಟ್ ನಲ್ಲಿ ನೀರಿನ ಪೂರೈಕೆ ಬಂದ್ ಆಗಲಿದೆ.
ಇದನ್ನೂ ವೀಕ್ಷಿಸಿ: ಶರಿಯಾದಲ್ಲಿ ನಂಬಿಕೆ ಇದ್ದರೆ, ಮುಸ್ಲಿಮರು ನಮ್ಮ ಡಾಕ್ಟರ್ ಬಳಿ ಬರಬಾರದು: ಅನಂತಕುಮಾರ್ ಹೆಗಡೆ