ಸರ್ಕಾರಿ ಸವಲತ್ತಿಗೆ ವಿಶೇಷಚೇತನರ ಪರದಾಟ: ಬಳ್ಳಾರಿ TO ಬೆಂಗಳೂರು ಪಾದಯಾತ್ರೆಗೆ ನಿರ್ಧಾರ

Oct 20, 2023, 10:39 AM IST

ಇವರೆಲ್ಲ ಅಂಧರು.. ಕಣ್ಣು ಕಾಣುತ್ತಿಲ್ಲ.. ಹೆಜ್ಜೆ ಇಡಬೇಕು ಅಂದ್ರೂ ವಾಕಿಂಗ್ ಸ್ಟಿಕ್ ಬೇಕು. ಆದರೂ ಬಳ್ಳಾರಿಯ ಹೊಸಪೇಟೆಯಿಂದ ಇವರೆಲ್ಲ ಬೆಂಗಳೂರಿಗೆ ಪಾದಯಾತ್ರೆ(Padayatra) ಹೊರಟಿದ್ದಾರೆ. ವಿಶೇಷ ಚೇತನರಿಗೆ(Spacially abled people) ಸರ್ಕಾರದ ಹಲವು ಯೋಜನೆಗಳಿವೆ. ಅದರಲ್ಲೂ ಕಣ್ಣು ಕಾಣದವರಿಗೆ ಪಿಂಚಣಿ ಸೇರಿ ಹಲವು ಸೌವಲತ್ತನ್ನು ಸರ್ಕಾರ ನೀಡಿದೆ. ಅದ್ರೆ, ದೇವರು ವರಕೊಟ್ರೂ ಪೂಜಾರಿ ಕೊಡ್ತಿಲ್ಲ ಅನ್ನೋ ಹಾಗಾಗಿದೆ ಇವರ ಕತೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಚೇರಿಗಳಿಗೆ ಅಲೆದು ಅಲೆದು ಬೇಸತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ನಮ್ಮ ಸಮಸ್ಯೆ ಸರಿಪಡಿಸಿ ಅಂತಾ ಸರ್ಕಾರದ ಗಮನ ಸಳೆಯಲು ಹೊಸಪೇಟೆಯಿಂದ ಬೆಂಗಳೂರಿಗೆ(Bengaluru) ಪಾದಯಾತ್ರೆ ಆರಂಭಿಸಿದ್ದಾರೆ. ಸಾರಿಗೆ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹೋಂಗಾರ್ಡ್ ನೌಕರರ ಖಾಯಂ ಮಾಡುವುದು ಸೇರಿದಂತೆ ಧ್ವನಿ ಇಲ್ಲದ 9 ವರ್ಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ. ಕಣ್ಣು ಕಾಣದವರ 350 ಕಿಲೋಮೀಟರ್ ಪಾದಯಾತ್ರೆಗೆ ಸಂಘಸಂಸ್ಥೆಗಳು ಬೆಂಬಲ ನೀಡಿವೆ. ಕಣ್ಣಿಲ್ಲದವರ ಬಾಳಲ್ಲಿ ಬೆಳಕು ಮೂಡಿಸಲೆಂದೇ ಸರ್ಕಾರ ವಿಶೇಷ ಯೋಜನೆಗಳನ್ನ ಜಾರಿಗೊಳಿಸುತ್ತೆ.. ಆದ್ರೆ, ಅದನ್ನ ಫಲಾನುಭವಿಗಳಿಗೆ ತಲುಪಿಸಬೇಕಿದ್ದ ದಪ್ಪ ಚರ್ಮದ ಅಧಿಕಾರಿಗಳಿಗೆ ಮಾತ್ರ ಇಂಥವರು ಕಾಣಿಸುತ್ತಲೇ ಇಲ್ಲ.. ಸರ್ಕಾರ ಈಗಲಾದ್ರೂ ಈ ವಿಶೇಷ ಚೇತನರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ. 

ಇದನ್ನೂ ವೀಕ್ಷಿಸಿ:  ಕೊಳಚೆ ನೀರಿನಲ್ಲಿ ಕೊಚ್ಚಿ ಹೋಯ್ತು 33 ಕೋಟಿ ಅನುದಾನ: ಹು-ಧಾ ಮಹಾನಗರ ಪಾಲಿಕೆಯಲ್ಲಿ ನೀರಿನ ಮಹಾ ಹಗರಣ..?