ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ ಎಂದಿದ್ದ ರಘುಪತಿ ಭಟ್! ತಿರುಗೇಟು ನೀಡಿದ ಅಭ್ಯರ್ಥಿ

ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ ಎಂದಿದ್ದ ರಘುಪತಿ ಭಟ್! ತಿರುಗೇಟು ನೀಡಿದ ಅಭ್ಯರ್ಥಿ

Published : May 28, 2024, 06:11 PM ISTUpdated : May 28, 2024, 06:12 PM IST

ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ, ಹೀಗಾಗಿ ಅವರ ಸೋಲಿನಿಂದ ಬಿಜೆಪಿಗೆ ನಷ್ಟವಿಲ್ಲ ಎಂದಿದ್ದ ರಘುಪತಿ ಭಟ್ ಹೇಳಿಕೆಗೆ ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ. ಭಾರತೀತ ಜನತಾ ಪಾರ್ಟಿ ನಿಂತಿರೋದು ಕಾರ್ಯಕರ್ತರ ಬಲದಿಂದ ಎಂದು ಹರಿಹಾಯ್ದಿದ್ದಾರೆ. 
 

ವಿಧಾನ ಪರಿಷತ್‌ ಚುನಾವಣೆ (Legislative Council Elections) ಹಿನ್ನೆಲೆ ದಿನಕ್ಕೊಂದು ಬೆಳವಣಿಗೆ ಬಿಜೆಪಿಯಲ್ಲಿ ಆಗುತ್ತಿದೆ. ಈ ನಡುವೆ ಧನಂಜಯ್ ಸರ್ಜಿಯಿಂದ (Dhananjaya Sarji) ಸರ್ಕಾರ ರಚನೆಯಾಗಲ್ಲ, ಹೀಗಾಗಿ ಅವರ ಸೋಲಿನಿಂದ ಬಿಜೆಪಿಗೆ ನಷ್ಟವಿಲ್ಲ ಎಂದಿದ್ದ ರಘುಪತಿ ಭಟ್ (Raghupati Bhat) ಹೇಳಿಕೆಗೆ ಧನಂಜಯ ಸರ್ಜಿ ತಿರುಗೇಟು ನೀಡಿದ್ದಾರೆ. ಭಾರತೀತ ಜನತಾ ಪಾರ್ಟಿ ನಿಂತಿರೋದು ಕಾರ್ಯಕರ್ತರ ಬಲದಿಂದ, ರಘುಪತಿ ಭಟ್ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರು ಕೂಡ ಮೂರು ಬಾರಿ ಶಾಸಕರಾಗಿದ್ದವರು, ಅವರ ಬಗ್ಗೆ ನಮಗೆ ಬಹಳ ಗೌರವವಿದೆ‌. ಆದರೆ ಭಾರತೀಯ ಜನತಾ ಪಾರ್ಟಿಗೆ ಇರೋದು ಒಬ್ಬರೆ ಅಭ್ಯರ್ಥಿ, ಸೂಕ್ತ ಅಭ್ಯರ್ಥಿಯನ್ನ ಸಂಘಟನೆಯ ಹಿರಿಯರು ಸೂಚಿಸಿದ್ದಾರೆ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ದುಡಿದ ಒಳ್ಳೆಯ ಅಭ್ಯರ್ಥಿಯನ್ನ ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. 

ಹಾಗೆಯೇ ಧನಂಜಯ ಸರ್ಜಿ ಬಿಜೆಪಿ(BJP) ಪಕ್ಷಕ್ಕೆ ಹೊಸಬನಲ್ಲ, 10 ನೇ ವಯಸ್ಸಿನಿಂದಲೇ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ,  ಈಗಲು ಸ್ವಯಂ ಸೇವಕ, ನನ್ನ ಜೀವ ಇರುವ ತನಕ ನಾನು ಸ್ವಯಂ ಸೇವಕ, ರಘುಪತಿ ಭಟ್‌ಗೆ ಮೂರು ಬಾರಿ ಎಂ.ಎಲ್.ಎ ಸೀಟ್ ಕೊಟ್ಟಿರೋದು ಬಿಜೆಪಿ, ಅದು ಅವರಿಗೆ ಗೊತ್ತಿರಲಿ. ಪಕ್ಷದ ಹಿರಿಯರ ತೀರ್ಮಾನ ಅಂತಿಮ‌, ಅದರಂತೆ ಚುನಾಚಣಾ ಕೆಲಸ ಆಗುತ್ತೆ‌, ಸರ್ಜಿ ಬಗ್ಗೆ ಮಾತನಾಡಲು ರಘುಪತಿ ಭಟ್ ಗೆ ಬೇರೆ ಏನು ವಿಚಾರ ಇಲ್ಲ ಎಂದು ಹರಿಹಾಯ್ದಿದ್ದಾರೆ. 

ಉಡುಪಿಯ ಮನೆಗೆ ಹೋದಾಗಲು ಸಹ ಸೌಜನ್ಯಕ್ಕೂ ಮನೆಯ ಒಳಗೆ ಕರೆದಿಲ್ಲ‌, ರಘುಪತಿ ಭಟ್ ಹೇಳ್ತಾರೆ ನಾನು ಕಾಂಗ್ರೆಸ್‌ನಿಂದ ಬಂದಿದ್ದೇನೆ ಅಂತ. ಆದರೆ. ಬಿಜೆಪಿ ಬರೋ ಮುಂಚಿತವಾಗಿ ಸಂಘಟನೆಯಲ್ಲಿ ಇದ್ದವನು ನಾನು, ಕಾಂಗ್ರೆಸ್ ನಿಂದ ಟಿಕೆಟ್ ನೀಡುತ್ತೇವೆ ಅಂತ ಬಹಳ ಒತ್ತಡ ಇತ್ತು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಯಾವುದಕ್ಕೂ ಮಣಿಯದೆ ಬಿಜೆಪಿಯಲ್ಲಿ ಇದ್ದೇನೆ‌. ಹೀಗಾಗಿ ರಘುಪತಿ ಭಟ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಬೆಂಗಳೂರಿನಲ್ಲಿ ಬಿಪಿಎಲ್‌ನಿಂದ ಹೊಸ ಘಟಕ ಸ್ಥಾಪನೆ: ಮೇಕ್‌ ಇನ್‌ ಇಂಡಿಯಾ ಅಭಿಯಾನದ ಭಾಗ!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!