ಇವೆಲ್ಲಾ ವಿಚಿತ್ರ,ವಿಕೃತ, ಅಸಹ್ಯ ಪಡುವ ಪ್ರಕರಣ, ಯಾರು ಮಾಡಿದ್ದಾರೆ ಅವರಿಗೆ ಏನೂ ಅನ್ನಿಸ್ತಿಲ್ಲ: ಪ್ರಿಯಾಂಕ್ ಖರ್ಗೆ

Jun 23, 2024, 11:53 AM IST

ಸೂರಜ್ ರೇವಣ್ಣ (Suraj Revanna case) ವಿರುದ್ಧ ಸಲಿಂಗ ಕಾಮ ಆರೋಪ(Allegation Of Sexual Assault) ಕೇಳಿಬಂದಿದ್ದು, ಈ ಬಗ್ಗೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ವಾಗ್ದಾಳಿ ನಡೆಸಿದ್ದಾರೆ. ಇವೆಲ್ಲಾ ವಿಚಿತ್ರ, ವಿಕೃತ, ಅಸಹ್ಯ ಪಡುವ ಪ್ರಕರಣ. ಯಾರು ಮಾಡಿದ್ದಾರೆ ಅವರಿಗೆ ಏನೂ ಅನ್ನಿಸ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ವಿಚಾರ ಮಾತನಾಡಿ, ಇದರ ಬಗ್ಗೆ ಏನ್ ಮಾತಾಡಬೇಕು ಅಂತಾ ಗೋತ್ತಾಗ್ತಿಲ್ಲ. ಪ್ರಜ್ವಲ್ , ಸೂರಜ್ , ಯಡಿಯೂರಪ್ಪ ಪ್ರಕರಣ ಆಗಿರಬಹುದು. ಯಾರು ಮಾಡಿದ್ದಾರೆ ಅವರಿಗೂ ಏನ್ ಅನ್ನಿಸ್ತಿಲ್ಲವಲ್ಲ. ಅವರು ಆತ್ಮಾವಲೋಕನ ಮಾಡಿಕೊಳ್ಳತ್ತಿಲ್ಲ. ದೊಡ್ಡ ಮನೆ , ದೊಡ್ಡ ಕುಟುಂಬದವರಿಗೆ ನೀವು ಕೇಳಬೇಕು. ನಾವು ಜವಾಬ್ದಾರಿ ಕುಟುಂಬದಿಂದ ಬಂದಿರೋದು, ಈ ಕಳಂಕ ಅಳಿಸೋವರೆಗೂ ಅಧಿಕಾರ ಬಿಟ್ಟಿರ್ತೆವೆ ಅಂತಾ ಹೇಳ್ತಾರಾ ? ಕುಮಾರಸ್ವಾಮಿ , ದೇವೇಗೌಡ , ರೇವಣ್ಣ ಬಗ್ಗೆ ಮಾತಾಡೋದಿಲ್ಲ. ಅವರ ಆತ್ಮಸಾಕ್ಷಿಗೆ ತಿಳಿದಂತೆ ಅವರು ಕೆಲಸ ಮಾಡಬೇಕು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ರಕ್ಷಾ ಫೌಂಡೇಶನ್‌ ವತಿಯಿಂದ ಪುಸ್ತಕ ವಿತರಣೆ: ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್‌ ನೀಡುವ ಕಾರ್ಯಕ್ರಮ