ಮಲಪ್ರಭಾ, ಘಟಪ್ರಭಾ ನದಿಗಳಿಂದಲೇ ಅಕ್ರಮ ಒತ್ತುವರಿ: ಸರ್ವೇ ಕಾರ್ಯದಲ್ಲಿ ಬಯಲಾಯ್ತು ಅಚ್ಚರಿ ಸತ್ಯ !

ಮಲಪ್ರಭಾ, ಘಟಪ್ರಭಾ ನದಿಗಳಿಂದಲೇ ಅಕ್ರಮ ಒತ್ತುವರಿ: ಸರ್ವೇ ಕಾರ್ಯದಲ್ಲಿ ಬಯಲಾಯ್ತು ಅಚ್ಚರಿ ಸತ್ಯ !

Published : Sep 23, 2023, 10:32 AM IST

ಮಲಪ್ರಭಾ, ಘಟಪ್ರಭಾ ಒಡಲಲ್ಲಿ ಅಕ್ರಮ ಮರಳು ದಂಧೆ ಅನ್ನೋದು ಹಳೇ ಸುದ್ದಿ. ಆದ್ರೆ ಈ ಖತರ್ನಾಕ್ ಕಳ್ಳರು ನದಿಯನ್ನೇ ಕದಿಯುತ್ತಿದ್ದಾರೆ ಅಂದ್ರೆ ನಂಬ್ತೀರಾ. ನದಿಯನ್ನ ಕದಿಯೋದೇಗೆ ಅನ್ನೋ ಅನುಮಾನ ಬಂತಾ.. ಈ ಸ್ಟೋರಿ ನೋಡಿ..
 

ನನ್ನದು ಅಂತ ಆಸ್ತಿ ಇರಬೇಕು ಅನ್ನೋರೇ ಹೆಚ್ಚು.. ಕಷ್ಟ ಪಟ್ಟು ಕೆಲವರು ಆಸ್ತಿ ಸಂಪಾದನೆ ಮಾಡಿದ್ರೆ, ಮತ್ತೆ ಕೆಲವರು ಭೂಮಿ ಆಸೆಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ತಾರೆ. ಇಂಥ ಎಷ್ಟೋ ಕೇಸ್‌ಗಳನ್ನ ನೋಡಿದ್ದೇವೆ. ಆದ್ರೆ, ಬಾಗಲಕೋಟೆಯಲ್ಲಿ(Bagalkot) ನದಿಗಳೇ ಭೂಮಿ ಒತ್ತುವರಿ(Land encrochment) ಮಾಡ್ಕೊಂಡಿವೆ. ಮಲಪ್ರಭಾ ಹಾಗೂ  ಘಟಪ್ರಭಾ ನದಿಗಳ ಸರ್ವೇ ಕಾರ್ಯದ ವೇಳೆ ಈ ಒತ್ತುವರಿ ರಹಸ್ಯ ಬಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಜನರ ಜೀವನಾಡಿಯಾದ ನದಿಗಳೆಂದರೆ(Rivers) ಮಲಪ್ರಭಾ ಹಾಗೂ ಘಟಪ್ರಭಾ. ಘಟಪ್ರಭಾ ನದಿ ಬಾಗಲಕೋಟೆಯ ಮುಧೋಳ ಮತ್ತು ರಬಕವಿ ಬನಹಟ್ಟಿ ತಾಲೂಕಿನಲ್ಲಿ ಹರಿಯುತ್ತೆ. ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ ತಾಲೂಕಿನಲ್ಲಿ ಮಲಪ್ರಭಾ ನದಿ ಹರಿಯುತ್ತೆ. ಆದ್ರೆ ನದಿ ತೀರದ 487 ಎಕರೆ ಜಾಗವನ್ನು ರೈತರು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಹೀಗಾಗಿ ನದಿಗಳು ತಾವು ಹರಿಯುವ ದಿಕ್ಕನ್ನೇ ಬದಲಿಸಿ, 665 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿವೆ.2009 & 2019ರಲ್ಲಿ ಪ್ರವಾಹ(Flood) ಉಂಟಾದಾಗ 71 ಗ್ರಾಮಗಳಿಗೆ ಮಲಪ್ರಭಾ ನದಿ ನೀರು ನುಗ್ಗಿತ್ತು. ಘಟಪ್ರಭಾ ನದಿ ನೀರು ನುಗ್ಗಿ 70 ಗ್ರಾಮಗಳಿಗೆ ಅಪಾರ ಹಾನಿಯಾಗಿತ್ತು. ಹೀಗಾಗಿ ನದಿಗಳ ಸರ್ವೇ ಕಾರ್ಯ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಈಗ ಭೂದಾಖಲೆಗಳ ಇಲಾಖೆ ಸರ್ವೇ ಕಾರ್ಯ ನಡೆಸಿದ್ದು, ಈ ವೇಳೆ ನದಿಗಳು ದಿಕ್ಕು ಬದಲಿಸಿ ಜಮೀನು ಒತ್ತುವರಿಮಾಡಿಕೊಂಡಿದ್ದಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಲಾಗಿದೆ. 

ಇದನ್ನೂ ವೀಕ್ಷಿಸಿ:  ಯುಐ ಟೀಸರ್ ನೋಡಿ ವಿದೇಶಿಗರು ಫಿದಾ ! ಬಾಪ್ ರೇ ಬಾಪ್ ಎಂದ ಪಾಕಿಸ್ತಾನಿ ಯೂಟುಬರ್‌..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more