ಧರ್ಮಕ್ಕೂ ಜಾತಿ ಮತಗಳಿಗೂ ಇರುವ ವ್ಯತ್ಯಾಸ ಗೊತ್ತಿಲ್ಲವೇ ಈ NRI ನಟನಿಗೆ

ಧರ್ಮಕ್ಕೂ ಜಾತಿ ಮತಗಳಿಗೂ ಇರುವ ವ್ಯತ್ಯಾಸ ಗೊತ್ತಿಲ್ಲವೇ ಈ NRI ನಟನಿಗೆ

Published : Oct 19, 2022, 07:53 PM IST

ಬೆಂಗಳೂರು: ಕನ್ನಡದ ಕಾಂತಾರ ಸಿನಿಮಾ ಯಶಸ್ವಿಯಾಗಿ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಓಡುತ್ತಿದ್ದರೆ. ಇತ್ತ ಕನ್ನಡದ ಮತ್ತೊಬ್ಬ ನಟ ಚೇತನ್‌ ಸೃಷ್ಟಿಸಿದ ವಿವಾದಿತ ಅಸಂಬದ್ಧ ಹೇಳಿಕೆ ವಿವಾದ ಸೃಷ್ಟಿಸಿದೆ.

ಬೆಂಗಳೂರು: ಕನ್ನಡದ ಕಾಂತಾರ ಸಿನಿಮಾ ಯಶಸ್ವಿಯಾಗಿ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಓಡುತ್ತಿದ್ದರೆ ಇತ್ತ ಕನ್ನಡದ ಮತ್ತೊಬ್ಬ ನಟ ಚೇತನ್‌ ಸೃಷ್ಟಿಸಿದ ವಿವಾದಿತ ಹೇಳಿಕೆ ವಿವಾದ ಸೃಷ್ಟಿಸಿದೆ. ಕಾಂತಾರ ಸಿನಿಮಾದಲ್ಲಿ ವೈದಿಕತೆಯನ್ನು ವೈಭವೀಕರಿಸಲಾಗಿದೆ. ಭೂತರಾಧಾನೆ ಹಿಂದೂ ಧರ್ಮದಲ್ಲಿಲ್ಲ ಅದು ಆದಿವಾಸಿ ಬುಡಕಟ್ಟು ಸಮುದಾಯದ ಆಚರಣೆ ಅದನ್ನು ಹಿಂದೂಗಳದ್ದು ಎಂದು ಹೇಳಲಾಗುತ್ತಿದೆ ಎಂಬ ವಾದ ಚೇತನ್‌ರದ್ದು, ತುಳುನಾಡಿನ ಕೊರಗ ಪಂಬದ ಮುಂತಾದ ಸಮುದಾಯಗಳು ಹಿಂದೂ ಧರ್ಮದ ಕೆಳಗೆ ಬರುವ ಒಂದೊಂದು ಜಾತಿಗಳು. ಎಲ್ಲಾ ಜಾತಿಗಳು ಜೊತೆಗೂಡಿಯೇ ಈ ದೈವರಾಧಾನೆಯನ್ನು ಮಾಡುವ ಸಂಪ್ರದಾಯ ತುಳುನಾಡಿನಲ್ಲಿದೆ. ಆದರೆ ಭೂತಾರಾಧನೆ ಮಾಡುವವರು ಹಿಂದೂಗಳಲ್ಲ ಆದಿವಾಸಿಗಳು ಇದು ಆದಿವಾಸಿಗಳ ಆಚರಣೆ. ಅದನ್ನು ಹಿಂದುಗಳದ್ದು ಎಂದು ಹೇಳಲಾಗುತ್ತಿದೆ ಎಂಬ ವಾದ ಚೇತನ್‌ರದ್ದು. ಆದರೆ ದೈವರಾಧನೆ ಮಾಡುವ ಇಲ್ಲಿನ ಬಹುತೇಕ ಸಮುದಾಯಗಳು, ದೈವ ಪಾತ್ರಿ ಅಥವಾ ದೈವ ನರ್ತಕರೆನಿಸಿರುವ ಪರವ ಪಂಬಂದ ಸಮುದಾಯಗಳೆಲ್ಲವೂ ಈ ಆರಾಧನೆಯ ಅವಿಭಾಜ್ಯ ಅಂಗ. ಹೀಗಿರುವಾಗ ಈ ನಟನ ಹೇಳಿಕೆಯ ಉದ್ದೇಶವೇನು? ಸ್ವತಃ ಓರ್ವ ನಟನಾಗಿ ಸಿನಿಮಾವನ್ನು ಸಿನಿಮಾವಾಗಿ ನೋಡುವ ಬದಲು ಸಮಾಜದ ಸ್ವಾಸ್ಥ್ಯ ಕೆಡಿಸುವ ಉದ್ದೇಶವೇಕೆ ಎಲ್ಲವನ್ನು ಬಲ್ಲವರಂತೆ ಮಾತನಾಡುವ ಈ ಎನ್‌ಆರ್‌ಐ ನಟನಿಗೆ ಧರ್ಮ, ಜಾತಿ, ಮತಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
 
 

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
Read more