Dharwad: ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅಧಿಕಾರಿಗಳು?

Dharwad: ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅಧಿಕಾರಿಗಳು?

Published : Nov 25, 2021, 12:52 PM IST

*  ಫಲಾನುಭವಿಗಳಿಗೆ ಸಮರ್ಪಕವಾಗಿ ಹಂಚಿಕೆಯಾಗದ ಮೊಟ್ಟೆ
*  5 ತಿಂಗಳಲ್ಲಿ ಕೊಟ್ಟಿದ್ದು ಕೇವಲ ಎರಡೇ ತಿಂಗಳ ಮೊಟ್ಟೆ ಮಾತ್ರ
*  ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗಿರುವ ಯೋಜನೆ 
 

ಧಾರವಾಡ(ನ.25):  ಸರ್ಕಾರ ಮಕ್ಕಳಿಗೆ, ಮಹಿಳೆಯರಿಗೆ ಅಂತ ವಿಶೇಷ ಅನುದಾನದ ಮೂಲಕ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತೆ. ಆದ್ರೆ ಆ ಯೋಜನೆಗಳು ಮಾತ್ರ ಸರಿಯಾಗಿ ತಲುಪುತ್ತೋ ಇಲ್ಲವೋ ಅನ್ನೋದನ್ನ ಜನಪ್ರತಿನಿಧಿಗಳೇ ಗಮನಿಸಬೇಕು. ಇಲ್ಲದಿದ್ರೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಿಗುವ ಯಾವ ಸೌಲಭ್ಯವೂ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತೆ. 

ಹೌದು, ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಡುವ ಮೊಟ್ಟೆ ಸಹ ಸರಿಯಾಗಿ ಹಂಚಿಕೆಯಾಗಿಲ್ಲ. ಸಾವಿರಾರು ಮೊಟ್ಟೆಗಳನ್ನ ಗುಳುಂ ಮಾಡಿದ್ರಾ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಜಿಲ್ಲೆಯಾದ್ಯಂತ ಅಂಗನವಾಡಿ ಮಕ್ಕಳು ಸೇರಿದಂತೆ, ಗರ್ಭಿಣಿಯರು, ಬಾಣಂತಿಯರಿಗೆ ತಿಂಗಳಿಗೆ 24 ಮೊಟ್ಟೆಗಳನ್ನ ನೀಡಲಾಗುತ್ತೆ. ಅದರಂತೆ ಮಕ್ಕಳಿಗೆ ವಾರದಲ್ಲಿ 3 ಬಾರಿ ಮೊಟ್ಟೆ ವಿತರಣೆಯಾಗುತ್ತೆ. ಆದ್ರೆ ಕಳೆದ 5 ತಿಂಗಳಲ್ಲಿ ಸರಿಯಾದ ಮೊಟ್ಟೆಗಳ ಹಂಚಿಕೆ ಆಗಿಯೇ ಇಲ್ಲ. ಇದರ ಬಗ್ಗೆ ಖುದ್ದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸಹ ದಾಸ್ತಾನು ಕೊಠಡಿಗೆ ಭೇಟಿ ನೀಡಿದಾಗ ಮೊಟ್ಟೆ ವಿತರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

Karwar: ಕೈ ಮುಗಿತೀವಿ ಸೇತುವೆ ನಿರ್ಮಿಸಿಕೊಡಿ, ಸಚಿವ ಹೆಬ್ಬಾರ್‌ಗೆ ಬಾಲಕಿಯ ಮನವಿ

ಇನ್ನು ಕೋವಿಡ್ ಸಮಯದಲ್ಲಿ ನಮ್ಮನ್ನ ಯಾರು ಕೇಳೋರು ಅನ್ನೋ ಮಟ್ಟಕ್ಕೆ ತಲುಪಿದ್ದ ಕೆಲ ಅಧಿಕಾರಿಗಳು ಸರಿಯಾಗಿ ಮೊಟ್ಟೆ ವಿತರಣೆಯನ್ನೇ ಮಾಡಿಲ್ಲ. ಅದರಲ್ಲೂ ಗ್ರಾಮಾಂತರ ಭಾಗಗಳಲ್ಲಿ ಗರ್ಭಿಣಿಯರು ಮೊಟ್ಟೆ ಕೇಳಿದ್ರೆ ಸರಿಯಾಗಿ ವಿತರಣೆ ಸಹ ಆಗಿಲ್ಲ ಅನ್ನೋದು ಜನರು ಸಹ ಹೇಳಿಕೊಂಡಿದ್ದಾರೆ. ಪ್ರತಿ ಅಂಗನವಾಡಿಗೆ ಬಾಲ ವಿಕಾಸ ಸಮಿತಿ ರಚನೆ ಮಾಡಿ ಅದರ ಅಧ್ಯಕ್ಷ ಮತ್ತು ಅಂಗನವಾಡಿ ಶಿಕ್ಷಕಿಯ ಬ್ಯಾಂಕ್ ಖಾತೆಗೆ ಹಣ ಪ್ರತಿ ತಿಂಗಳು ಜಮವಾಣೆಯಾಗುತ್ತೆ. ಆದ್ರೆ ಕೊರೊನ ನಂತರ ಮೊಟ್ಟೆ ಹಣ ದುಬಾರಿಯಾಗಿದ್ದಕ್ಕೆ ಬಂದ ಹಣವನ್ನು ಸಹ ಹಾಗೆಯೇ ಇಟ್ಟುಕೊಂಡು, ಮೊಟ್ಟೆ ಖರೀದಿ ಸಹ ಮಾಡದೆ ಮಹಿಳೆಯರಿಗೆ ಮೊಟ್ಟೆಯನ್ನ ವಿತರಣೆ ಮಾಡಿಲ್ಲ.

ಒಟ್ಟಾರೆ ಮಕ್ಕಳಿಗೆ ಮಹಿಳೆಯರಿಗೆ ಆಗ ಸಿಗಬೇಕಿದ್ದ ಮೊಟ್ಟೆಯನ್ನ ಇದೀಗ ಕೊಡುವ ಪ್ರಯತ್ನ ಮಾಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ಅಧಿಕಾರಿಗಳೇ ಮನವರಿಕೆ ಮಾಡಿಕೊಳ್ಳಬೇಕು. ದಣಿದಾಗ ನೀರು ಕೊಡದ ಅಧಿಕಾರಿಗಳು ದಣಿವಾರಿದ ಮೇಲೆ ಅನ್ನ ನೀಡೋಕೆ ಬಂದಂತಾಯಿತು ಅಧಿಕಾರಿಗಳ ಈ ಕಾರ್ಯ.
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more